ಇಪ್ಪತ್ತು ತಿಂಗಳು ಜೊತೆಗೂಡಿ ಸರ್ಕಾರ ರಚಿಸಿದ ದೋಸ್ತಿ ಪಕ್ಷಗಳ ಮುಖಂಡರು ಈಗ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದು ಜನರಿಗೆ ಮನರಂಜನೆ ಯಾಗಿದ್ದರೂ ಅಸಹ್ಯ ಹುಟ್ಟಿಸುತ್ತಿದೆ.
ಜೆಡಿಎಸ್ ಮುಖಂಡರ ಪ್ರತಿಕೃತಿಗಳನ್ನು ಅಸಹ್ಯವಾಗಿ ರೂಪಿಸಿ ದಹನ ಮಾಡುತ್ತಿರುವುದು, ಅದಕ್ಕೂ ಮುನ್ನ ಟೀಕಾಪ್ರಹಾರ ಮಾಡುವುದು ಬಿಜೆಪಿಯ ಹೋರಾಟದಲ್ಲಿ ಸಾಮಾನ್ಯವೆನಿಸಿದೆ.
ಉಭಯ ಪಕ್ಷಗಳ ಮುಖಂಡರು ತಮ್ಮ ತಮ್ಮಲ್ಲೇ ಗೌಪ್ಯವಾಗಿರಬೇಕಾದ ವಿಷಯಗಳನ್ನು ಜಗಜ್ಜಾಹೀರು ಮಾಡಿಕೊಳ್ಳುವುದರಿಂದ ಬಂದ ಲಾಭವೇನು ಎಂಬ ಪ್ರಶ್ನೆ ಎದುರಾಗಿದೆ.
ತಮ್ಮಿಂದಲೇ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು ಎಂದು ಬಿಜೆಪಿ ಮುಖಂಡ ಯಡಿಯೂರಪ್ಪ ಹೇಳುತ್ತಿದ್ದಾರೆ.
ಯಡಿಯೂರಪ್ಪ ಅವರು ತಮ್ಮ ಬಳಿ ಬಂದು ಅನಂತಕುಮಾರ್‌ಗೆ ಕೊಡಬೇಕಾಗಿರುವ ಐದು ಕೋಟಿ ರೂ. ಕೊಡಿ. ನಾನು ಬಂದು ನಿಮ್ಮ ಪಕ್ಷದಲ್ಲಿ ಸೇರುತ್ತೇನೆ.
ನನಗೆ ಸಚಿವ ಹುದ್ದೆ ಕೊಡಿ ಎಂದು ಅಂಗಲಾಚಿದರು, ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಕೊಟ್ಟವನು ನಾನು ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ.
ಜೆಡಿಎಸ್‌ನಲ್ಲೂ ಲಕ್ಫ್ಷಂತರ ಕಾರ್ಯಕರ್ತರಿದ್ದಾರೆ, ಬಿಜೆಪಿ ನಡೆಸುತ್ತಿರುವ ಅಸಹ್ಯ ಪ್ರತಿಭಟನೆಗಳಿಗೆ ಉತ್ತರ ಕೊಡುವ ತಾಕತ್ತು ತಮಗೂ ಇದೆ, ನಮ್ಮ ತಾಳ್ಮೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳನ್ನು ಒಂದು ವಾರದವರೆಗೆ ಮೌನವಾಗಿ ನೋಡುತ್ತೇವೆ, ನಂತರ ಇದಕ್ಕೆ ತಕ್ಕ ಉತ್ತರ ನೀಡುವುದಾಗಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
|