ಬೇಡವಾದ ಚುನಾವಣೆ ಎದುರಿಸಬೇಕಾಗಿರುವ ಪರಿಸ್ಥಿತಿಗೆ ಕಾರಣರಾದ ಜೆಡಿಎಸ್ ಮುಖಂಡರ ವಿರುದ್ಧ ಕಿಡಿಕಾರುತ್ತಿರುವ ಆ ಪಕ್ಷದ ಶಾಸಕರು ಪಕ್ಷ ತೊರೆಯುವ ಸಿದ್ದತೆ ನಡೆಸುತ್ತಿದ್ದಾರೆ.
ಮಧ್ಯಂತರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತಾವು ಜೆಡಿಎಸ್ ಪಕ್ಷದ ಚಿಹ್ನೆಯ ಅಡಿ ಅಥವಾ ಈಗಿರುವ ವರಿಷ್ಠರ ನಾಯಕತ್ವದಲ್ಲಿ ಸ್ಪರ್ಧಿಸುವುದು ಬೇಡ ಎಂಬ ನಿರ್ಧಾರಕ್ಕೆ ಸುಮಾರು 15 ಮಂದಿ ಶಾಸಕರು ಬಂದಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಈ ಶಾಸಕರು ತಮ್ಮ ಮುಂದಿನ ಹಾದಿ ಕಂಡುಕೊಳ್ಳುವ ನಿಟ್ಟಿನಲ್ಲಿ ತಾರಾ ಹೋಟೆಲೊಂದರಲ್ಲಿ ಸಮಾಲೋಚನೆ ನಡೆಸಿದ್ದಾರೆ. ಅವರ ಮುಂದೆ ಮೂರು ಆಯ್ಕೆಗಳಿವೆ.
ಪಕ್ಷ ತೊರೆದು ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳುವುದು ಮೊದಲನೆಯದು. ಯಾವುದಾದರೂ ರಾಷ್ಟ್ತ್ರೀಯ ಪಕ್ಷದಲ್ಲಿ ಗುರುತಿಸಿಕೊಳ್ಳುವುದು ಅಥವಾ ಸೇರ್ಪಡೆಯಾಗುವುದು ಎರಡನೆ ಆಯ್ಕೆ ಆದರೆ, ಸ್ವತಂತ್ರ್ಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ವಿಜೇತರಾಗಿ ಮುಂದೆ ರಚೆನೆಯಾಗಲಿರುವ ಸರ್ಕಾರಕ್ಕೆ ಬೆಂಬಲ ನೀಡುವುದು ಮೂರನೆಯ ಆಯ್ಕೆ.
ಆದರೆ ತಮ್ಮ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಇನ್ನೂ ಆರಂಭಿಕ ಹಂತದಲ್ಲೇ ಚರ್ಚೆ ನಡೆಯುತ್ತಿದೆ. ತಮ್ಮ ಪಕ್ಷದ ನಾಯಕರ ಮುಂದಿನ ಹೆಜ್ಜೆ ಇಡುತ್ತಾರೆ ಎಂಬುದರ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ.
ಪಕ್ಷದ ವರಿಷ್ಠ ದೇವೇಗೌಡರು ಮತ್ತು ಎಚ್.ಡಿ.ರೇವಣ್ಣ ಅವರನ್ನು ದೂರ ಇಟ್ಟರೆ ತಾವು ಜೊತೆಗೆ ಇರುವುದಾಗಿ ಕೆಲ ಶಾಸಕರು ಕುಮಾರಸ್ವಾಮಿ ಅವರಿಗೆ ಸಂದೇಶವನ್ನು ರವಾನಿಸಿದ್ದಾರೆ ಎಂದು ಹೇಳಲಾಗಿದೆ.
|