ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬೇಡ ಎನ್ನುವ ಕಾಂಗ್ರೆಸ್ಸಿನ ಹಿಂದೆ ದಳ
ರಾಜ್ಯದಲ್ಲಿ ಪರ್ಯಾಯ ಸರಕಾರ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿಸಬಹುದು ಎಂಬ ನಿರೀಕ್ಷೆಯಲ್ಲಿ ಜೆಡಿಎಸ್ ಶಾಸಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರೆ, ಮತ್ತೊಂದೆಡೆ ರಾಜ್ಯ ಕಾಂಗ್ರೆಸ್ ನಾಯಕರು ಚುನಾವಣೆಗೆ ಸಜ್ಜಾಗಿರುವುದಾಗಿ ತಿಳಿಸಿದ್ದಾರೆ. ಅತ್ತ ಕಾಂಗ್ರೆಸ್ ದಳದ ಗೊಡವೆ ಬೇಡ ಎನ್ನುತ್ತಿದ್ದರೆ, ದಳದ ಶಾಸಕರು ಮಾತ್ರ ಹೇಗಾದರೂ ಮಾಡಿ ಸರಕಾರ ರಚಿಸುವುದಕ್ಕೆ ಮುಂದಾಗಿದ್ದಾರೆ.

ಬಿಜೆಪಿಗೆ ಅಧಿಕಾರ ನೀಡದ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯ ಎದ್ದಿರುವ ಶಾಸಕರು ಕಾಂಗ್ರೆಸ್ ಪಕ್ಷ ಸರಕಾರ ರಚನೆಗೆ ಒಪ್ಪಿದರೆ 19 ತಿಂಗಳ ಆಡಳಿತವನ್ನು ಪೂರ್ಣಗೊಳಿಸಿ ನಂತರ ಚುನಾವಣೆ ಎದುರಿಸಬಹುದು ಎಂಬ ಲೆಕ್ಕಚಾರ ಹಾಕತೊಡಗಿದ್ದಾರೆ.

ಕಳೆದ ಎರಡು ದಿನಗಳಿಂದ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರ ನಿವಾಸದಲ್ಲಿ ಎಡಬಿಡದೆ ಸಮಾಲೋಚನೆಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷದಿಂದ ಸರಕಾರ ರಚನೆಗೆ ಒಪ್ಪಿಗೆ ದೊರಕಿದರೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು, ಒಂದು ವೇಳೆ ವಿಧಾನಸಭೆ ವಿಸರ್ಜನೆಯಾದರೆ ಯಾವ ಪಕ್ಷದಲ್ಲಿ ತಮ್ಮ ಭವಿಷ್ಯ ಕಂಡುಕೊಳ್ಳಬೇಕು ಎಂಬುದು ಜೆಡಿಎಸ್ ಶಾಸಕರ ತೊಳಲಾಟವಾಗಿದೆ.

ಜೆಡಿಎಸ್ ಹೆಸರಿನಲ್ಲಿ ಚುನಾವಣೆಗೆ ಹೋದರೆ ಜನರನ್ನು ಎದುರಿಸುವುದು ಕಷ್ಟವಾಗುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಸಾರ್ವಜನಿಕರಿಗೆ ಈಗ ವಿಶ್ವಾಸ ಉಳಿದಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನರ ನಂಬಿಕೆ ಕಳೆದುಕೊಂಡಿದ್ದಾರೆ ಎಂಬುದು ಜೆಡಿಎಸ್ ಶಾಸಕರ ದೂರು.
ಮತ್ತಷ್ಟು
ಜೆಡಿಎಸ್‌ನಲ್ಲಿ ಒಡಕಿನ ದನಿ
ಪರಸ್ಪರ ಕೆಸರಾಟ:ಜನರಿಗೆ ಮನರಂಜನೆ
ಮಧ್ಯಂತರ ಚುನಾವಣೆಗೆ ರಾಜಕೀಯ ಪಕ್ಷಗಳ ಸಜ್ಜು
ಮುಂದಿನ ಏಪ್ರಿಲ್‌ನಲ್ಲಿ ಮಧ್ಯಂತರ ಚುನಾವಣೆ ?
ಮಂಗಳೂರು-ಬೆಂಗಳೂರು ರೈಲಿಗಾಗಿ ರಾಜಕೀಯ ಮೇಲಾಟ
ವೇಣು, ಕುಷ್ಟಗಿ ಸಹಿತ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ