ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಯಾವಾಗ ಬೇಕಾದರೂ ಚುನಾವಣೆಗಳು ಘೋಷಣೆಯಾಗಬಹುದಾಗಿದೆ. ಜೊತೆಗೆ ರಾಜ್ಯ ರಾಜಕಾರಣದಲ್ಲಿನ ಕ್ಷಿಪ್ರ ಬೆಳವಣಿಗೆಗಳಿಂದಾಗಿ ಜೆಡಿಎಸ್ ಇಮೇಜಿಗೆ ಸಾಕಷ್ಟು ಹಾನಿಯೂ ಆಗಿದೆ. ಈ ಹಿನ್ನೆಲೆಯಲ್ಲಿ ಹಾನಿ ಸರಿಪಡಿಸಿ, ಪಕ್ಷವನ್ನು ಚುನಾವಣೆಗೆ ಸರ್ವ ಸನ್ನದ್ಧವಾಗಿಸಲು ಅರಮನೆ ಮೈದಾನದಲ್ಲಿ ಈ ತಿಂಗಳ 29ರಂದು ಜೆಡಿಎಸ್ ನಾಯಕರ ರಾಜ್ಯಮಟ್ಟದ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
ಪಕ್ಷದ ನಾಯಕರು, ಮಾಜಿ ಸಚಿವರು ಹಾಗೂ ಹಾಲಿ ಶಾಸಕರು, ಪದಾಧಿಕಾರಿಗಳು ಮೊದಲಾದವರು ಪಾಲ್ಗೊಳ್ಳುವ ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಸೇರಿದಂತೆ ಯುವಕರಿಗೆ ಪಕ್ಷದ ಸಂಘಟನೆಯ ಹೊಣೆ ಹೊರಿಸುವ ಕುರಿತು ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆಯೆಂದು ಮೂಲಗಳು ತಿಳಿಸಿವೆ.
|