ಈವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಎಂದರೆ ಎಲ್ಲರಿಗೂ ಅರ್ಥವಾಗುತ್ತಿತ್ತು. ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಿರ್ವಹಿಸಿ ಆ ಮೂಲಕ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಪ್ರವೇಶ ಪಡೆಯಲು ಹಾದಿ ಮಾಡಿಕೊಡುತ್ತಿದ್ದ ಸಿಇಟಿ ವಿಭಾಗ ಈಗ ಹೊಸರೂಪ ತಾಳಿದೆ.
ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಎಂಬ ಅವತಾರ ತಾಳಿದ ಸಿಇಟಿ ಸೆಲ್ ಸರ್ಕಾರದ ವಿವಿಧ ಇಲಾಖೆಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡಲು ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡು ತನ್ನ ಹೊಣೆಗಾರಿಕೆಯನ್ನು ವಿಸ್ತರಿಸಿಕೊಂಡಿದೆ. ಸದ್ಯದಲ್ಲೇ ಪ್ರಾಧಿಕಾರ ಸಿಇಟಿ-2008 ಪರೀಕ್ಷೆಗಳನ್ನು ನಿರ್ವಹಿಸಲಿದೆ.
ಆರೋಗ್ಯ, ಮೀನುಗಾರಿಕೆ ಇಲಾಖೆ ಹಾಗೂ ಬಿಬಿಎಂಪಿಯ ಹುದ್ದೆಗಳ ಭರ್ತಿಗಾಗಿ ನಡೆಸಲಾಗುವ ಪರೀಕ್ಷೆಗಳ ನಿರ್ವಹಣಾ ಜವಾಬ್ದಾರಿಯನ್ನು ಇದು ಕೈಗೆತ್ತಿಕೊಂಡಿದೆ. ಮುಂದಿನ ವರ್ಷ ವಿವಿಧ ಇಲಾಖೆಗಳಲ್ಲಿ ನೌಕರರ ನೇಮಕಮಾಡಲು ನಡೆಸಲಾಗುವ ಪರೀಕ್ಷೆಗಳನ್ನು ಕೆಇಟಿ ನಿರ್ವಹಿಸಲಿದೆ. ಕೆಇಟಿ ರೂಪುಗೊಳ್ಳವುದರೊಂದಿಗೆ 12 ವರ್ಷಗಳ ಸಿಇಟಿ ಸೆಲ್ ಇತಿಹಾಸದ ಪುಟಗಳಿಗೆ ಸೇರಿದಂತಾಗಿದೆ.
|