ಒಟ್ಟಾಗಿದ್ದಾಗ ನೆನಪಿಗೆ ಬಾರದ ದೋಸ್ತಿ ಪಕ್ಷಗಳ ಹುಳುಕುಗಳು ಒಂದೊಂದೇ ಬಹಿರಂಗವಾಗುತ್ತಿವೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾದ ದಿನವೇ ಸಚಿವ ಸಂಪುಟ ಸಭೆ ನಡೆಸಿ ಹೆಚ್ಚಿನ ದರ ನಿಗದಿಪಡಿಸಿ ತಮ್ಮ ಪುತ್ರನ ಹೀರೋ ಕಂಪನಿ ಷೋರೂಮಿನಿಂದಲೇ ಬಾಲಕಿಯರಿಗೆ ಸೈಕಲ್ ಖರೀದಿಸಲು ಒಪ್ಪಿಗೆ ಕೊಟ್ಟಿದ್ದರು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಸಾರಾಯಿ ನಿಷೇಧ ಹಾಗೂ ಸಾಲ ಮನ್ನಾಗೆ ಯಡಿಯೂರಪ್ಪ ಅವರು ವಿರೋಧ ವ್ಯಕ್ತಪಡಿಸಿದ ಬಗ್ಗೆ ತಮ್ಮ ಬಳಿ ದಾಖಲೆ ಇದೆ ಎಂದು ತಿಳಿಸಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿದ್ದಾರೆ. ಸತ್ಯಾಂಶ ತಿಳಿಯುವ ಪ್ರಯತ್ನ ಮಾಡದೆ ನಿರಾಧಾರವಾಗಿ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದಿದ್ದಾರೆ.
ಯಡಿಯೂರಪ್ಪ ಅವರ ಆಪ್ತ ವಲಯದ ಪ್ರಕಾರ ಅವರ ಪುತ್ರನಿಗೆ ಶಿವಮೊಗ್ಗದಲ್ಲಿ ಹೀರೋ ಹೋಂಡಾ ಬೈಕ್ ಷೋರೂಂ ಇದೆ.
ತಮಗೆ ಅಂಥ ಕಂಪನಿಯೊಂದಿಗೆ ಸಂಬಂಧವಿರುವುದು ಸಾಬೀತಾದರೆ ತಾವು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
|