ಮುಂದಿನ ಒಂದು ವರ್ಷದಲ್ಲಿ ಸುಮಾರು 100 ಕ್ಕೂ ಹೆಚ್ಚು ಐಟಿ-ಬಿಟಿ ಕಂಪನಿಗಳು ಮೈಸ್ರೂರಿಗೆ ಬರಲಿರುವುದರಿಂದ ಐಟಿ ಸಿಟಿ ಬೆಂಗಳೂರಿಗೆ ಪರ್ಯಾಯವಾಗಿ ಮೈಸೂರು ಐಟಿ ಸಿಟಿಯಾಗಿ ರೂಪುಗೊಳ್ಳವು ನೀರೀಕ್ಷೆ ಇದೆ.
ಈಗಾಗಲೇ ಇನ್ಫೋಸಿಸ್, ವಿಪ್ರೋ ಸೇರಿದಂತೆ 53 ಕಂಪನಿಗಳು ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಕೂರ್ಗಳ್ಳಿ ಬಳಿ ಐಟಿ ಕಂಪನಿಗಳಿಗೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ಸರ್ಕಾರ ಒದಗಿಸಲಿದೆ. ಮೈಸೂರು ಸದ್ಯದಲ್ಲೇ ದೇಶದ ಮುಖ್ಯ ಐಟಿ ತರಬೇತಿ ಹಾಗೂ ಕ್ಯಾಂಪಸ್ ಸಂದರ್ಶನ ಕೇಂದ್ರವಾಗಲಿದೆ.
ಈ ನಿಟ್ಟಿನಲ್ಲಿ ರಾಮನ್ಅಂತಾರಾಷ್ಟ್ತ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಭಾರತದ ಪ್ರಥಮ ಮಾಹಿತಿ ತಂತ್ರಜ್ಞಾನ ಪರಿಪೂರ್ಣ ಶಾಲೆ (ಐಟಿ ಫಿನಿಷಿಂಗ್ ಸ್ಕೂಲ್) ಕಾರ್ಯಾರಂಭ ಮಾಡಿದೆ.
|