ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬೆಂಗಳೂರು-ಮೈಸೂರು ಷಟ್ಪಥ ಯೋಜನೆಗೆ ಗ್ರಹಣ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಕಾರಿಡಾರ್ ಯೋಜನೆಗೆ ಹಲವು ಕಾರಣಗಳಿಂದಾಗಿ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ರೂಪಿಸಿದ ಯೋಜನೆ ಸ್ಥಗಿತಗೊಂಡಿದೆ.

ಬೆಂಗಳೂರು-ಮೈಸೂರು ನಡುವಣ ನಾಲ್ಕು ಪಥಗಳ ರಸ್ತೆಯನ್ನು ಆರು ಪಥಗಳ ರಸ್ತೆಯನ್ನಾಗಿ ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಎಳ್ಳು ನೀರು ಬಿಟ್ಟಂತಾಗಿದೆ. ರಾಜ್ಯದಲ್ಲಿನ ಬದಲಾದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕೈಬಿಟ್ಟರೂ ಅಚ್ಚರಿಪಡಬೇಕಿಲ್ಲ ಎನ್ನುವುದು ಸರ್ಕಾರದ ಉನ್ನತ ಮೂಲಗಳ ನುಡಿಗಳು.

ಮತ್ತೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಈ ಯೋಜನೆಗೆ ಚಾಲನೆ ದೊರೆಯುವ ಸಾಧ್ಯತೆ ತೀರಾ ಕಡಿಮೆ. ಸರ್ಕಾರ ಅಸ್ತಿತ್ವಕ್ಕೆ ಬಂದರೂ ಯಾವ ಪಕ್ಷ ಅದರ ನೇತೃತ್ವ ವಹಿಸುತ್ತದೆ ಎಂಬುದರ ಮೇಲೆ ಯೋಜನೆಯ ಭವಿಷ್ಯ ನಿಧಾರವಾಗಲಿದೆ.

ಬಿಎಂಐಸಿ ಯೋಜನೆಗೆ ನೈಸ್ ಕಂಪನಿಗೆ ಭೂಮಿ ನೀಡುವ ವಿಷಚಿುದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ನೈಸ್ ಕಂಪನಿ ಮಾಲೀಕ ಖೇಣಿ ಅವರ ನಡುವಣ ಸಂಘರ್ಷದಿಂದಾಗಿ ಆ ಯೊಜನೆ ವಿವಾದವಾಗಿ ಮಾರ್ಪಟ್ಟು ನ್ಯಾಯಾಲಯದ ಮೆಟ್ಟಿಲೇರಿದೆ.

ಈ ಹಿನ್ನೆಲೆಯಲ್ಲಿ ಷಟ್ಪಥ ಯೋಜನೆಗೆ ಹಿಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರು ಹೆಚ್ಚು ಒತ್ತು ನೀಡಿದ್ದರು.

ಸುಮಾರು 750 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯ ರೂಪು ರೇಷೆ ಸಿದ್ಧವಾಗಿತ್ತು. ನೈಸ್ ಕಂಪನಿಯ ಬಿಎಂಐಸಿ ಯೋಜನೆಗೆ ಸಡ್ಡು ಹೊಡೆಯಲು ಈ ರಸ್ತೆಯನ್ನು ಷಟ್ಪಥ ಮಾಡಲು ಕುಮಾರಸ್ವಾಮಿ ಅವರ ಸರ್ಕಾರ ಈ ಯೋಜನೆ ರೂಪಿಸಿತ್ತು.

ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಈ ಯೋಜನೆ ಸ್ಥಗಿತಗೊಂಡಿದೆ. ಮುಂದೆ ಯಾವ ಸರ್ಕಾರ ರಚನೆಯಾಗುತ್ತದೆ ಎಂಬುದರ ಮೇಲೆ ಯೋಜನೆ ಭವಿಷ್ಯ ನಿರ್ಧಾರವಾಗಲಿದೆ.
ಮತ್ತಷ್ಟು
ಐಟಿ; ಬೆಂಗಳೂರಿಗೆ ಮೈಸೂರು ಪರ್ಯಾಯ
ಜೆಡಿಎಸ್-ಬಿಜೆಪಿ ಹುಳುಕುಗಳು ಬಹಿರಂಗ
ರಾಜ್ಯದಾದ್ಯಂತ ಮೈಕೊರೆವ ಚಳಿ
ಡಿ. 12ರಿಂದ ಉಡುಪಿ ಕನ್ನಡ ಸಾಹಿತ್ಯ ಸಮ್ಮೇಳನ
ರಾಜ್ಯ ರಾಜಕಾರಣ: ಪ್ರಕಾಶ್ ಬಂಡಾಯದ ಬಾವುಟ
ಕುಮಾರ್ ಹೇಳಿಕೆಗೆ ಅನಂತ ಟೀಕೆ