ಜನಪ್ರತಿನಿಧಿಗಳ ಅಸಹ್ಯ ವರ್ತನೆಯಿಂದ ರೋಸಿಹೋದ ರಾಜ್ಯದ ಜನರು ಇನ್ನಷ್ಟು ಕಾಲ ರಾಷ್ಟ್ರಪತಿಗಳ ಆಳ್ವಿಕೆ ಮುಂದುವರೆಯಬೇಕೆಂದು ಬಯಸುತ್ತಿದ್ದಾರೆ. ರಾಷ್ಟ್ರಪತಿಗಳು ಆಳ್ವಿಕೆ ಅವಧಿಯಲ್ಲಿ ರಾಜ್ಯಪಾಲರು ನಡೆಸುವ ಆಡಳಿತಕ್ಕೆ ಅಷ್ಟೇನೂ ವೆಚ್ಚವಾಗುವುದಿಲ್ಲ.
ಚುನಾಯಿತ ಸರ್ಕಾರವಿದ್ದರೆ ಸಚಿವರ ಕಾರುಬಾರಿಗೆ, ಅರ್ಥವಿಲ್ಲದ ಹಾಗೂ ಹಣದ ಲಭ್ಯತೆ ಇಲ್ಲದೆ ರೂಪುಗೊಂಡು ನಡೆಯುವ ಶಂಕುಸ್ಥಾಪನೆ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಹಣ ಪೋಲಾಗುತ್ತಿತ್ತು.
ಅಸ್ವಾಭಾವಿಕ ಸಮ್ಮಿಲನದಿಂದ ಹುಟ್ಟಿದ್ದ ಬಿಜೆಪಿ ನೇತೃತ್ವದ ಸರ್ಕಾರ ಒಂದು ವಾರದಲ್ಲೇ ಪತನಗೊಂಡಿದ್ದರ ಬಗ್ಗೆ ಜನರಿಗೆ ಬೇಸರವಿಲ್ಲ.
ಅದರ ಅಸ್ತಿತ್ವ ಮುಂದುವರೆದಿದ್ದರೆ ದೋಸ್ತಿ ಪಕ್ಷ ಜೆಡಿಎಸ್ ಮುಖಂಡರು ಯಡಿಯೂರಪ್ಪ ಅವರಿಗೆ ಕೊಡಬಾರದ ಕಷ್ಟ ಕೊಟ್ಟು ಆಡಳಿತದ ಕಡೆ ಗಮನ ಹರಿಸದಂತೆ ಮಾಡುತ್ತಿದ್ದರು ಎಂಬುದು ಜನರ ಅಭಿಪ್ರಾಯ.
ರಾಷ್ಟ್ರಪತಿಗಳು ಆಡಳಿತ ಹೇರಿರುವುದರಿಂದ ಕೊನೆಯ ಪಕ್ಷ ಆರು ತಿಂಗಳಾದರೂ ಬುದ್ದಿಹೀನ ಸರ್ಕಾರವಿರುದಿಲ್ಲವಲ್ಲ, ರಾಜಕೀಯ ಮಾಲಿನ್ಯದಿಂದ ಮುಕ್ತವಾಗಿರಬಹುದೆಂಬದು ಜನರಿಗೆ ಸಂತೋಷದ ವಿಷಯವಾಗಿದೆ.
|