ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕೈಗಾರಿಕೆಗಳಿಗೆ ಭೂಸ್ವಾಧೀನ: ರೈತರಿಗೆ ನೋಟಿಸ್
ಹೊಸ ಉದ್ದಿಮೆಗಳ ಸ್ಥಾಪನೆಗೆ ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು, ಅದನ್ನು ರೈತರು ವಿರೋಧಿಸುವುದು ಪ್ರಸ್ತುತ ಸಾಮಾನ್ಯವಾಗಿದೆ.

ರೈತರಿಂದ ಸ್ವಾಧೀನಪಡಿಸಿಕೊಂಡ ಒಂದು ಎಕರೆ ಭೂಮಿಗೆ ಕೆಐಎಡಿಬಿ ಅಭಿವೃದ್ದಿ ಪಡಿಸಿದ ಪ್ರದೇಶದಲ್ಲಿ 8,500 ಚದರಡಿ ಭೂಮಿಯನ್ನು ಪರಿಹಾರವಾಗಿ ನೀಡುವ ಸಂಬಂಧ ಸಂಬಂಧಪಟ್ಟ ರೈತರಿಗೆ ನೋಟಿಸ್ ಜಾರಿಮಾಡಿದೆ.

ಆದರೆ ರೈತ ಸಮುದಾಯ ಇದರ ವಿರುದ್ಧ ಸಿಡಿದೆದ್ದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಾಲದಿಮ್ಮನ ಹಳ್ಳಿ, ಕದಡದಾಸನಹಳ್ಳಿ, ಬಟ್ರಮಾರೇನ ಹಳ್ಳಿ ಮುಂತಾದ ಗ್ರಾಮಗಳ ಅನೇಕ ರೈತರಿಗೆ ಮಂಡಳಿ ನೋಟಿಸ್‌ಗಳನ್ನು ಜಾರಿ ಮಾಡಿದೆ.

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಸ್ವಾಧೀನ ಪಡಿಸಿಕೊಳ್ಳುವ ಒಂದು ಎಕರೆ ಭೂಮಿಗೆ ರೈತರಿಗೆ 9600 ಚದರಡಿ ಅಭಿವೃದ್ದಿ ಪಡಿಸಿದ ಭೂಮಿಯನ್ನು ನೀಡಲಾಗುತ್ತಿದೆ. ಅದೇ ರೀತಿ ಕೆಐಎಡಿಬಿ ನೀಡಬೇಕು ಎನ್ನುವುದು ರೈತ ಸಮುದಾಯದ ಆಗ್ರಹವಾಗಿದೆ.

ಅಷ್ಟೊಂದು ಪ್ರಮಾಣದ ಭೂಮಿಯನ್ನು ಪರಿಹಾರವಾಗಿ ನೀಡಲು ಸಾಧ್ಯವಿಲ್ಲ ಎಂಬುದು ಮಂಡಳಿ ಅಧಿಕಾರಿಗಳ ಅಭಿಪ್ರಾಯ. ಈ ರೀತಿ ಭೂಪರಿಹಾರ ಪಡೆದ ರೈತರು ತಮ್ಮ ಭೂಮಿ ಸ್ವಾಧೀನದ ವಿರುದ್ಧ ನ್ಯಾಯಾಲಯಗಳ ಮೆಟ್ಟಿಲು ಏರುವಂತಿಲ್ಲ. ಮಂಡಳಿ ಅಭಿವೃದ್ದಿ ಪಡಿಸಿದ ಭೂಮಿಯಲ್ಲಿ ರೈತರಿಗೆ ನಿರ್ದಿಷ್ಟ ಭಾಗದಲ್ಲಿ ಪರಿಹಾರದ ರೂಪದಲ್ಲಿ ನೀಡಲಾಗುವ ಭೂಮಿಯನ್ನು ನೀಡಲಾಗುವುದಿಲ್ಲ ಎಂಬುದು ಮಂಡಳಿ ವಿಧಿಸಿರುವ ಷರತ್ತುಗಳಲ್ಲಿ ಒಂದಾಗಿದೆ.
ಮತ್ತಷ್ಟು
ಏಳು ಜಿಲ್ಲೆಗಳಲ್ಲಿ ಬಿಜೆಪಿ ಜನಜಾಗೃತಿ
ಪ್ರಕಾಶ್ ವಿರುದ್ದ ಶಿಸ್ತಿನ ಕ್ರಮಃಮೆರಾಜ್
ರಾಷ್ಟ್ರಪತಿ ಆಳ್ವಿಕೆಯತ್ತ ಜನರ ಒಲವು
ಬೆಂಗಳೂರು-ಮೈಸೂರು ಷಟ್ಪಥ ಯೋಜನೆಗೆ ಗ್ರಹಣ
ಐಟಿ; ಬೆಂಗಳೂರಿಗೆ ಮೈಸೂರು ಪರ್ಯಾಯ
ಜೆಡಿಎಸ್-ಬಿಜೆಪಿ ಹುಳುಕುಗಳು ಬಹಿರಂಗ