ಕರ್ನಾಟಕದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸೋರಿಕೆಯಿಂದಾಗಿ ಗಣನೀಯ ಪ್ರಮಾಣದ ವಿದ್ಯುತ್ ವ್ಯರ್ಥವಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ.
ಅದನ್ನು ನಿವಾರಿಸುವ ನಿಟ್ಟಿನಲ್ಲಿ ಸೂಪರ್ವೈಸರಿ ಕಂಟ್ರೋಲ್ ಅಂಡ್ ಡಾಟಾ ಅಕ್ವಿಷನ್ ಎಂಬ ಹೊಸ ವ್ಯವಸ್ಥೆಯನ್ನು ಕೆಪಿಟಿಸಿಎಲ್ ಬೆಂಗಳೂರಿನಲ್ಲಿ ಜಾರಿಗೆ ತಂದಿದೆ.
ಈ ವ್ಯವಸ್ಥೆಯಲ್ಲಿ ವಿದ್ಯುತ್ ಪರಿವರ್ತಕಗಳಿಗೆ ಮೀಟರ್‌ಗಳನ್ನು ಅಳವಡಿಸಲಾಗುವುದು. ಸರಬರಾಜಾಗುವ ವಿದ್ಯುತ್, ಪರಿವರ್ತಕಗಳಿಂದ ಬಳಕೆದಾರರಿಗೆ ಸರಬರಾಜಾಗುವ ವಿದ್ಯುತ್ ಅನ್ನು ಮೀಟರ್‌ನಲ್ಲಿ ದಾಖಲಾಗಿರುವ ಮಾಹಿತಿಯಿಂದ ಪಡೆಯಲಾಗುವುದು.
ಇದರಿಂದ ಸೋರಿಕೆಯಾಗುವ ವಿದ್ಯುತ್ ಪ್ರಮಾಣವನ್ನು ಖಚಿತವಾಗಿ ತಿಳಿಯಬಹುದಾಗಿದೆ. ಯಾವ ಮಾರ್ಗದಲ್ಲಿ ಯಾವ ಪ್ರಮಾಣದಲ್ಲಿ ವಿದ್ಯುತ್ ಸೋರಿಕೆಯುಂಟಾಗುತ್ತಿದೆ ಎಂಬ ಮಾಹಿತಿ ದೊರೆಯುತ್ತದೆ. ಅದನ್ನು ಆಧರಿಸಿ ವಿದ್ಯುಚ್ಛಕ್ತಿ ಸೋರಿಕೆ ಪ್ರಮಾಣವನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ.
|