ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕರ್ನಾಟಕ ವಿಧಾನಸಭೆ ವಿಸರ್ಜನೆಗೆ ಅಸ್ತು
PTI
ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಘೋಷಣೆ ಮತ್ತು ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಿರುವುದರ ಕ್ರಮವನ್ನು ಲೋಕಸಭೆಯಲ್ಲಿ ಸೋಮವಾರ ಧ್ವನಿಮತದಿಂದ ಅನುಮೋದಿಸುವ ಮೂಲಕ ರಾಜ್ಯದಲ್ಲಿ ವಿಧಾನಸಭೆ ವಿಸರ್ಜನೆ ಮತ್ತು ಹೊಸದಾಗಿ ಚುನಾವಣೆಗೆ ಅವಕಾಶ ಕಲ್ಪಿಸಲಾಗಿದೆ.

ಗೃಹ ಸಚಿವ ಶಿವರಾಜ್ ಪಾಟೀಲ್ ರಾಷ್ಟ್ರಪತಿ ಅಳ್ವಿಕೆ ಘೋಷಣೆಗೆ ಸಂಸತ್ತಿನ ಅನುಮೋದನೆ ಪಡೆಯಲು ಸದನದಲ್ಲಿ ನಿರ್ಣಯವನ್ನು ಮಂಡಿಸಿದರು. ಲೋಕಸಭೆಯಲ್ಲಿ ನಿರ್ಣಯ ಅನುಮೋದನೆ ಪಡೆದಿದ್ದರಿಂದ ವಿಧಾನಸಭೆ ವಿಸರ್ಜನೆಗೆ ಮತ್ತು ಹೊಸ ಚುನಾವಣೆಗೆ ದಾರಿ ಸುಗಮವಾಗಿದೆ.

ಕರ್ನಾಟಕದಲ್ಲಿ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಿದ ಬಳಿಕ ರಾಷ್ಟ್ರಪತಿ ಆಳ್ವಿಕೆ ಘೋಷಣೆಗೆ ಕಾರಣವಾದ ಸಂದರ್ಭಗಳನ್ನು ಪಾಟೀಲ್ ಸುದೀರ್ಘವಾಗಿ ವಿವರಿಸಿದರು.ಬಿಜೆಪಿ-ಜೆಡಿಎಸ್ ಒಕ್ಕೂಟವು ಸದನದಲ್ಲಿ ಬಹುಮತ ಸಾಬೀತುಪಡಿಸಲು ವಿಫಲವಾಯಿತು ಮತ್ತು ಬೇರಾವುದೇ ಪಕ್ಷ ಸರ್ಕಾರ ರಚಿಸುವ ಸ್ಥಿತಿಯಲ್ಲಿರಲಿಲ್ಲವೆಂದು ಅವರು ಹೇಳಿದರು.

ಕಳೆದ ನ.20ರಂದು ಸಂವಿಧಾನದ 356ನೇ ವಿಧಿಯನ್ವಯ ರಾಷ್ಟ್ರಪತಿ ಘೋಷಣೆಯನ್ನು ಹೊರಡಿಸಿ ರಾಷ್ಟ್ರಪತಿ ಆಳ್ವಿಕೆಯ ಅಡಿಯಲ್ಲಿ ರಾಜ್ಯವನ್ನು ತಂದರು.ಸಂವಿಧಾನದ ನಿಯಮಗಳು ಮತ್ತು ಸುಪ್ರೀಂಕೋರ್ಟ್ ತೀರ್ಪುಗಳ ಅನ್ವಯ ರಾಷ್ಟ್ರಪತಿ ಆಡಳಿತ ಘೋಷಣೆಯನ್ನು ಉಭಯ ಸದನಗಳಲ್ಲಿ ಎರಡು ತಿಂಗಳೊಳಗೆ ಅನುಮೋದಿಸಬೇಕಾಗಿದೆ.
ಮತ್ತಷ್ಟು
ವಿದ್ಯುಚ್ಛಕ್ತಿ ಸೋರಿಕೆ ತಡೆಗಟ್ಟಲು ಹೊಸ ವ್ಯವಸ್ಥೆ
ಕೈಗಾರಿಕೆಗಳಿಗೆ ಭೂಸ್ವಾಧೀನ: ರೈತರಿಗೆ ನೋಟಿಸ್
ಏಳು ಜಿಲ್ಲೆಗಳಲ್ಲಿ ಬಿಜೆಪಿ ಜನಜಾಗೃತಿ
ಪ್ರಕಾಶ್ ವಿರುದ್ದ ಶಿಸ್ತಿನ ಕ್ರಮಃಮೆರಾಜ್
ರಾಷ್ಟ್ರಪತಿ ಆಳ್ವಿಕೆಯತ್ತ ಜನರ ಒಲವು
ಬೆಂಗಳೂರು-ಮೈಸೂರು ಷಟ್ಪಥ ಯೋಜನೆಗೆ ಗ್ರಹಣ