ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿರುಸುಗೊಂಡ ರಾಜಕೀಯ ಚಟುವಟಿಕೆ
ರಾಜ್ಯ ವಿಧಾನಸಭೆ ವಿಸರ್ಜನೆಯ ಪ್ರಕ್ರಿಯೆ ಪೂರ್ಣಗೊಂಡು ವಿಸರ್ಜನೆ ಕುರಿತ ಅಧಿಕೃತ ಪ್ರಕಟಣೆ ಹೊರಬೀಳುವ ಪ್ರಸಕ್ತ ವೇಳೆಯಲ್ಲಿ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಅದರ ಜೊತೆಗೆ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ.

ಜೆಡಿಎಸ್ ವಿರುದ್ಧ ಸಮರ ಸಾರಿರುವ ಬಿಜೆಪಿ ಈಗಾಗಲೇ ಚುನಾವಣಾ ಪ್ರಚಾರ ಎನ್ನಬಹುದಾದ ಜನಜಾಗೃತಿ ಕಾರ್ಯಕ್ರಮದಲ್ಲಿ ನಿರತವಾಗಿದೆ. ಜಾತ್ಯಾತೀತ ಜನತಾದಳವನ್ನು ಸಾರಾಸಗಟಾಗಿ ತಿರಸ್ಕರಿಸಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಬಿಜೆಪಿ ರಾಜ್ಯದ ಜನತೆಯನ್ನು ಕೋರುತ್ತಿದೆ.

ಜನಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ಬಹಿರಂಗಪಡಿಸಿದ್ದಾರೆ.

ಜೆಡಿಎಸ್ ಹೇಳಿದ ಕಾಗದಪತ್ರಗಳಿಗೆ ಸಹಿಹಾಕಿದರೂ, ಆ ಪಕ್ಷಕೋರಿದ ಯೋಜನೆಗಳಿಗೆ ಹಣ ಮಂಜೂರು ಮಾಡಿದರೂ ತಮಗೆ ಕಡೆಗೆ ವಿಶ್ವಾಸದ್ರೋಹ ಬಗೆದರು ಎಂದು ಯಡಿಯೂರಪ್ಪ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ.

ಮುಂಬರುವ ಚುನಾವಣೆಯ ಗುಂಗಿನಲ್ಲೇ ಇರುವ ಅವರು ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಟುವಾದ ಶಬ್ದಗಳಲ್ಲಿ ಟೀಕೆ ಮಾಡದೆ ತಮಗೆ ಆಗಿರುವ ಅನ್ಯಾಯವನ್ನು ಹಾಗೂ ಹಣಕಾಸು ಸಚಿವರಾಗಿ ಮಾಡಿದ ಹತ್ತು ಹಲವು ಸಾಧನೆಗಳನ್ನು ಮಾತ್ರ ಪ್ರಸ್ತಾಪಿಸುವ ಮೂಲಕ ಜನಸಾಮಾನ್ಯರ ಹೃದಯಗಳಿಗೆ ಲಗ್ಗೆ ಹಾಕುವ ಯತ್ನ ಮಾಡುತ್ತಿದ್ದಾರೆ.
ಮತ್ತಷ್ಟು
ಪಕ್ಷ ತೊರೆಯುವವರಿಗೆ ದೇವೇಗೌಡರ ಬೀಳ್ಕೊಡುಗೆ
ಗೌಡರ ವಿರುದ್ಧ ಎಂ.ಪಿ.ಪ್ರಕಾಶ್ ಆಕ್ರೋಶ
ಉಗ್ರರ ಭೀತಿ: ವಿಧಾನ-ವಿಕಾಸ ಸೌಧಗಳಿಗೆ ಭದ್ರತೆ ಹೆಚ್ಚಳ
ಚಲುವರಾಯಸ್ವಾಮಿ ಬಿಜೆಪಿ ಸೇರುವರೇ?
ಕರ್ನಾಟಕ ವಿಧಾನಸಭೆ ವಿಸರ್ಜನೆಗೆ ಅಸ್ತು
ವಿದ್ಯುಚ್ಛಕ್ತಿ ಸೋರಿಕೆ ತಡೆಗಟ್ಟಲು ಹೊಸ ವ್ಯವಸ್ಥೆ