ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಂಡಾಯ ಜೆಡಿಎಸ್ ಸಭೆಯತ್ತ ಎಲ್ಲರ ಕಣ್ಣು
ಜೆಡಿಎಸ್ ವರಿಷ್ಠ ಮುಖಂಡರ ಯಾವುದೇ ಸಂಧಾನ ಕಾರ್ಯಗಳಿಗೆ ಜಗ್ಗದಿರುವ ಎಂ.ಪಿ.ಪ್ರಕಾಶ್ ಅವರ ಅಸಮಾಧಾನ ಶಮನವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಮಂಗಳವಾರ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ ಅವರು ಪ್ರಕಾಶ್ ಜತೆ ನಡೆಸಿದ ಮಾತುಕತೆ ಯಾವುದೇ ಫಲ ನೀಡಿಲ್ಲ. ತದನಂತರ ವರಿಷ್ಠ ದೇವೇಗೌಡರ ಮಾತುಗಳಿಗೂ ಬಗ್ಗಲಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ನಡೆಯಲಿರುವ ಪಕ್ಷದ ಸಮಾನ ಮನಸ್ಕರ ಸಭೆಯೆಡೆಗೇ ಎಲ್ಲರ ಕುತೂಹಲದ ಕಣ್ಣುಗಳು ನೆಟ್ಟಿವೆ.

ಇದು ಬಂಡಾಯವಲ್ಲ, ಪಕ್ಷ ಒಡೆಯುವ ಕೆಲಸವನ್ನು ಮಾಡುವುದಿಲ್ಲ ಎಂದು ಎಂ.ಪಿ.ಪ್ರಕಾಶ್ ಹೇಳಿದ್ದಾರಾದರೂ ಜೆಡಿಎಸ್‌ನಲ್ಲಿ ಈಗ ಎಲ್ಲವೂ ಮೊದಲಿನಂತಿಲ್ಲ ಎಂಬುದು ಬಹಿರಂಗ ಸತ್ಯ. ಏಕೆಂದರೆ ಪಕ್ಷವನ್ನು ಒಡೆಯುವ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳಿರುವುದರ ಜತೆಗೆ, ಈಗಾಗಲೇ ಸಾಕಷ್ಟು ದೂರ ಬಂದಿದ್ದೇನೆ, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಮಾತನ್ನೂ ಪ್ರಕಾಶ್ ಆಡಿರುವುದು ಜೆಡಿಎಸ್ ಎಂಬ ಕನ್ನಡಿಯಲ್ಲಿನ ಒಡಕಲು ಬಿಂಬವನ್ನು ಎತ್ತಿ ತೋರಿಸುತ್ತಿದೆ.

ಇತ್ತೀಚಿನ ರಾಜಕೀಯ ವಿದ್ಯಮಾನಗಳಿಂದ ಕೆಲ ಶಾಸಕರು ಬೇಸತ್ತಿದ್ದಾರೆ. 20 ರಿಂದ 30 ಶಾಸಕರು ಈ ಸಮಾನ ಮನಸ್ಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ಮುಂದಿನ ಹಾದಿ ಯಾವುದಾಗಬೇಕು ಎಂಬುದರ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಪ್ರಕಾಶ್ ಹೇಳಿದ್ದಾರಾದರೂ ಆ ಶಾಸಕರು ಯಾರಿರಬಹುದು ಎಂಬ ಅಂಶವೇ ಕುತೂಹಲಕ್ಕೆ ಕಾರಣವಾಗಿದೆ.
ಮತ್ತಷ್ಟು
ಯಡ್ಡಿ ವಿರುದ್ಧ ಶೆಟ್ಟರ್ ಅಕ್ರೋಶ
ಮತ್ತೆ ನಾಡಗೀತೆ ವಿವಾದ
ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಪುತ್ತಿಗೆ ಶ್ರಿಗಳು
ಬುಧವಾರ ಜೆಡಿಎಸ್ ಬಂಡಾಯ ಸಭೆ
ವಿಧಾನಸಭೆ ವಿಸರ್ಜನೆಗೆ 3 ಪಕ್ಷಗಳ ಸ್ವಾಗತ
ಬಿರುಸುಗೊಂಡ ರಾಜಕೀಯ ಚಟುವಟಿಕೆ