ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜೆಡಿಎಸ್ ಅತೃಪ್ತರಿಗೆ ಬಿಜೆಪಿ ಗಾಳ
ದೋಸ್ತಿ ಪಕ್ಷಗಳಾಗಿದ್ದ ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಒಂದು ಕಡೆ ಭಿನ್ನಮತ ಭುಗಿಲೆದ್ದಿದ್ದರೆ ಮತ್ತೊಂದು ಕಡೆ ಜೆಡಿಎಸ್‌ನಲ್ಲಿರುವ ಅತೃಪ್ತ ಮುಖಂಡರಿಗೆ ಹಾಗೂ ಶಾಸಕರಿಗೆ ಬಿಜೆಪಿ ಗಾಳಹಾಕುತ್ತಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಮಂಗಳವಾರ ರಾತ್ರಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಮಣ್ಯನಾಯ್ಡು ಮತ್ತು ಆರ್.ಅಶೋಕ್ ನಗರದ ಖಾಸಗಿ ಹೊಟೇಲೊಂದರಲ್ಲಿ ಹಲವು ಜೆಡಿಎಸ್ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಬಿಜೆಪಿ ಹಮ್ಮಿಕೊಂಡಿರುವ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಟ್ಟಾ ಸುಬ್ರಮಣ್ಯನಾಯ್ಡು ಮತ್ತು ಆರ್. ಅಶೋಕ್ ದಿಢೀರನೆ ಬೆಂಗಳೂರಿಗೆ ಬಂದು ಜೆಡಿಎಸ್ ಶಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಾಲೋಚನೆಗೆ ಸಮಯ ನಿಗದಿ ಮಾಡಿದ್ದಾರೆ.

ಖಾಸಗಿ ಹೊಟೇಲೊಂದರಲ್ಲಿ ನಡೆದ ಈ ಸಭೆಯಲ್ಲಿ ಎನ್. ಚೆಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಜಮೀರ್ ಅಹ್ಮದ್ ಖಾನ್, ಪುಟ್ಟಣ್ಣ ಮೊದಲಾದ ಏಳೆಂಟು ಶಾಸಕರು ಪಾಲ್ಗೊಂಡಿದ್ದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಬಿಜೆಪಿಗೆ ಸೇರಿದಲ್ಲಿ ಲಭಿಸಬಹುದಾದ ಸ್ಥಾನಮಾನ, ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡುವ ಖಾತರಿ ಮತ್ತಿತರ ವಿಷಯಗಳ ಬಗ್ಗೆ ಮುಕ್ತ ಮಾತುಕತೆ ನಡೆದಿದೆ ಎನ್ನಲಾಗಿದೆ.
ಮತ್ತಷ್ಟು
ಜೆಡಿಎಸ್‌ಗೆ ದೇವೇಗೌಡರು ಅನಿವಾರ್ಯವಲ್ಲ
ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
ಹಳೇ ಒಳಜಗಳಕ್ಕೆ ಮತ್ತೆ ಮರಳಿತು ಬಿಜೆಪಿ...
ಬಂಡಾಯ ಜೆಡಿಎಸ್ ಸಭೆಯತ್ತ ಎಲ್ಲರ ಕಣ್ಣು
ಯಡ್ಡಿ ವಿರುದ್ಧ ಶೆಟ್ಟರ್ ಅಕ್ರೋಶ
ಮತ್ತೆ ನಾಡಗೀತೆ ವಿವಾದ