ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಗೋವಾ: ಕನ್ನಡ ಚಿತ್ರಗಳ ಪ್ರದರ್ಶನ
38ನೇ ಅಂತಾರಾಷ್ಟ್ತ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಮೂರು ಕನ್ನಡ ಚಿತ್ರಗಳು ಪ್ರದರ್ಶಿತವಾಗುತ್ತಿವೆ. ಈ ಮೂರು ಕನ್ನಡ ಚಿತ್ರಗಳ ಪೈಕಿ ಮೊಗ್ಗಿನ ಜಡೆ ಈಗಾಗಲೇ ಪ್ರದರ್ಶನಗೊಂಡಿದ್ದು, ಬುಧವಾರ ಕಾಡಬೆಳದಿಂಗಳು ಹಾಗೂ ಗುರುವಾರ ದಾಟು ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಜಾಗತೀಕರಣದಿಂದಾಗಿ ನಗರ ಪ್ರದೇಶಗಳಲ್ಲಿ, ಅದರಲ್ಲೂ ಮಧ್ಯಮ ವರ್ಗದ ಜನರು ಅನುಭವಿಸುತ್ತಿರುವ ಬವಣೆಗಳನ್ನು ಹೇಳುವುದಕ್ಕೆ ಮೊಗ್ಗಿನ ಜಡೆ ಚಿತ್ರದಲ್ಲಿ ಯತ್ನಿಸಲಾಗಿದ್ದು,ಈ ಚಿತ್ರದ ಮೂಲಕ ಜಾಗತೀಕರಣದ ಸವಾಲುಗಳನ್ನು ನಿರೂಪಿಸುವುದಕ್ಕೆ ನಿರ್ದೇಶಕ ಪಿ. ರಾಮದಾಸ್ ನಾಯ್ಡು ಪ್ರಯತ್ನಿಸಿದ್ದಾರೆ.

ಈ ಚಿತ್ರ ಪ್ರದರ್ಶನಕ್ಕೆ ಮುನ್ನ ಕನ್ನಡದ ಕಿರುಚಿತ್ರ ಪ್ರಾರಂಭ ಪ್ರದರ್ಶನವಾಗಿದೆ. ಸಂತೋಷ್ ಶಿವನ್ ನಿರ್ದೇಶನದ ಈ ಚಿತ್ರದಲ್ಲಿ ಬಿ.ಸರೋಜಾದೇವಿ, ಜಯಂತಿ, ರಮ್ಯ, ಪ್ರಭುದೇವ, ಜೈಜಗದೀಶ್, ಸಾಧುಕೋಕಿಲ ಮುಂತಾದವರು ಅಭಿನಯಿಸಿದ್ದಾರೆ.
ಮತ್ತಷ್ಟು
ಜೆಡಿಎಸ್ ಅತೃಪ್ತರಿಗೆ ಬಿಜೆಪಿ ಗಾಳ
ಜೆಡಿಎಸ್‌ಗೆ ದೇವೇಗೌಡರು ಅನಿವಾರ್ಯವಲ್ಲ
ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
ಹಳೇ ಒಳಜಗಳಕ್ಕೆ ಮತ್ತೆ ಮರಳಿತು ಬಿಜೆಪಿ...
ಬಂಡಾಯ ಜೆಡಿಎಸ್ ಸಭೆಯತ್ತ ಎಲ್ಲರ ಕಣ್ಣು
ಯಡ್ಡಿ ವಿರುದ್ಧ ಶೆಟ್ಟರ್ ಅಕ್ರೋಶ