ಜೆಡಿಎಸ್‌ನಲ್ಲಿ ಗುಪ್ತಗಾಮಿನಿಯ ಸ್ವರೂಪದಲ್ಲಿರುವ ಭಿನ್ನಮತ ಈಗ ಸಮಾನ ಮನಸ್ಕ ಶಾಸಕರ ಸಭೆಯ ರೂಪದಲ್ಲಿ ಹೊರಹೊಮ್ಮಿದ್ದು, ಅದು ಕೈಗೊಳ್ಳುವ ನಿರ್ಧಾರದೆಡೆಗೆ ಎಲ್ಲರ ಕಣ್ಣು ನೆಟ್ಟಿದೆ.
ಎಂ.ಪಿ. ಪ್ರಕಾಶ್ ನೇತೃತ್ವದಲ್ಲಿ ಸಭೆ ಪ್ರಾರಂಭವಾಗಿದ್ದು ಅಲಂಗೂರು ಶ್ರೀನಿವಾಸ್, ಬಾಲಕೃಷ್ಣ, ಚಲುವರಾಯಸ್ವಾಮಿ, ಸೂರ್ಯನಾರಾಯಣ ರೆಡ್ಡಿ, ಬಂಡೆಪ್ಪ ಕಾಶೆಂಪುರ್, ಸಂತೋಷ್ ಲಾಡ್, ರಾಜಣ್ಣ ಹಾಗೂ ಬಿ.ಸಿ.ಪಾಟೀಲ್ ಇದರಲ್ಲಿ ಪಾಲ್ಗೊಂಡಿದ್ದಾರೆ.
ಸಭೆಯಲ್ಲಿ ಪಾಲ್ಗೊಳ್ಳಲು ಬಂದ ಶಾಸಕರಲ್ಲಿ ಒಬ್ಬರಾದ ಬಿ.ಸಿ.ಪಾಟೀಲರನ್ನು ಶಾಸಕರ ಮುಂದಿನ ಕ್ರಮದ ಕುರಿತು ಕೇಳಿದಾಗ, ಮುಂದೆ ಯಾವ ರೀತಿ ಹೆಜ್ಜೆ ಇಡಬೇಕೆಂಬುದರ ಕುರಿತು ಪರಸ್ಪರ ಚರ್ಚಿಸಲೆಂದೇ ಈ ಸಭೆ ಆಯೋಜಿಸಲಾಗಿದೆ ಎಂದು ನುಡಿದರು.
|