ಜೆಡಿಎಸ್ ಮುಖಂಡ ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ನಡೆದ ಸಮಾನ ಮನಸ್ಕ ಶಾಸಕರ ಸಭೆ ಮುಕ್ತಾಯಗೊಂಡಿದ್ದು, ಅದರಲ್ಲಿ 17 ಎಂ.ಎಲ್.ಎ.ಗಳು ಹಾಗೂ 3 ಎಂ.ಎಲ್.ಸಿ.ಗಳು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಇನ್ನೂ ಹಲವಾರು ಶಾಸಕರು ಸಭೆಯಲ್ಲಿ ಭಾಗವಹಿಸುವುದಿತ್ತು. ಪೂರ್ವನಿರ್ಧಾರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾದ್ದರಿಂದ ಬರಲಾಗಲಿಲ್ಲ ಎಂದು ಕೆಲವೊಂದು ಶಾಸಕರು ತಿಳಿಸಿದರು.
ಮುಂದಿನ ವಾರ ಮತ್ತೊಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ ಎಂ.ಪಿ.ಪ್ರಕಾಶ್, ನಾಳೆ ದೇವೇಗೌಡರು ಆಯೋಜಿಸಿರುವ ಸಭೆ ಕಾರ್ಯಕಾರಿಣಿ ಸಭೆಯಲ್ಲ, ಅದೊಂದು ಬಹಿರಂಗ ಸಭೆ ಮಾತ್ರ ಎಂಬ ಮಾತನ್ನು ಹೇಳಲು ಮರೆಯಲಿಲ್ಲ.
ಇಂದಿನ ಸಭೆಯಲ್ಲಿ ಭಾಗವಹಿಸಿದ ಶಾಸಕರಾರೂ ನಾಳಿನ ಸಭೆಯಲ್ಲಿ ಭಾಗವಹಿಸುವುದಿಲ್ಲ. ಹಾಗೂ ಪಕ್ಷ ಒಡೆಯುವ ಇಲ್ಲವೇ ಮತ್ತೊಂದು ಪಕ್ಷ ರಚಿಸುವ ಚಿಂತನೆಗಳಾವವೂ ಸಭೆಯಲ್ಲಿ ಹೊರಹೊಮ್ಮಿಲ್ಲ ಎಂದಷ್ಟೇ ತಿಳಿದುಬಂದಿದೆ.
|