ಜೆಡಿಎಸ್(ಸುರೇಂದ್ರ ಮೋಹನ್ ಬಣ) ಮುಖಂಡ ಎಂ.ಪಿ.ವೀರೇಂದ್ರ ಕುಮಾರ್ ಮಾಜಿ ಸಚಿವ ಎಂ.ಪಿ. ಪ್ರಕಾಶ್ ಅವರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು.
ಬೆಂಗಳೂರಿಗೆ ಆಗಮಿಸಿದ್ದ ವೀರೇಂದ್ರ ಕುಮಾರ್ ಅವರು ಪ್ರಕಾಶ್ ಮನೆಗೆ ತೆರಳಿ ರಾಜ್ಯ ರಾಜಕಾರಣದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚಿಸಿ ಜನತಾ ಪರಿವಾರ ಬಲಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೀರೇಂದ್ರ ಕುಮಾರ್, ಈ ಭೇಟಿಗೆ ಯಾವುದೇ ರಾಜಕೀಯ ಮಹತ್ವವಿಲ್ಲ, ಇದೊಂದು ಸೌಜನ್ಯದ ಭೇಟಿಯಾಗಿದೆ ಎಂದು ತಿಳಿಸಿದರು.
ನಮ್ಮ ಪಕ್ಷಕ್ಕೆ ಬರುವಂತೆ ನಾನೇನು ಪ್ರಕಾಶ್ ಅವರನ್ನು ಆಹ್ವಾನಿಸಿಲ್ಲ, ರಾಜ್ಯ ರಾಜಕೀಯದಲ್ಲಿ ನಡೆದಿರುವ ಇತ್ತೀಚಿನ ವಿದ್ಯಮಾನಗಳ ಕುರಿತು ನಾವು ಚರ್ಚಿಸಿದೆವು ಎಂದರು.
ನಮ್ಮದೇ ನಿಜವಾದ ಜೆಡಿಎಸ್ ಆಗಿದೆ. ನಮ್ಮ ಪಕ್ಷವನ್ನು ನಾವು ಬಲಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು
ಸಮರ್ಥನೆ: ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿರುವ ಶಾಸಕರು ಯಾರೊಬ್ಬರು ಬಲವಂತದಿಂದ ಸೇರಿಲ್ಲ, ಕಳೆದ ಒಂದು ತಿಂಗಳಿನಿಂದ ನಡೆದ ವಿದ್ಯಮಾನಗಳಿಂದ ಬೇಸತ್ತು ಸೇರಿದ್ದೇನೆ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
|