ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ವಿಧಾನ ಸಭೆ ವಿಸರ್ಜನೆ: ರಾಜಕೀಯ ದೊಂಬರಾಟಕ್ಕೆ ವಿರಾಮ
ಕೇಂದ್ರ ಸಚಿವ ಸಂಪುಟದ ಶಿಫಾರಸ್ಸಿನ ಅನ್ವಯ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಇಂದು ಕರ್ನಾಟಕ ರಾಜ್ಯ ವಿಧಾನಸಭೆಯ ವಿಸರ್ಜನೆ ಅಂಗಿಕಾರ ಹಾಕುವ ಮೂಲಕ ರಾಜ್ಯ ರಾಜಕಾರಣದ ರಾಜಕೀಯ ದೊಂಬರಾಟಕ್ಕೆ ಅಂತಿಮವಾಗಿ ತೆರೆಬಿತ್ತು.

ರಾಷ್ಟ್ರಪತಿ ಭವನ ಬುಧವಾರ ಸಾಯಂಕಾಲ ನೀಡಿದ ಪ್ರಕಟಣೆಯನ್ವಯ ಕೇಂದ್ರ ಸಚಿವ ಸಂಪುಟ ನೀಡಿದ ಸಲಹೆಯನ್ನು ಆಧರಿಸಿ ಕರ್ನಾಟಕ ರಾಜ್ಯ ವಿಧಾನ ಸಭೆಯನ್ನು ವಿಸರ್ಜನೆ ಮಾಡಲಾಯಿತು ಎಂದು ತಿಳಿಸಲಾಗಿದೆ.

ನವಂಬರ್ 19 ರಿಂದ ರಾಷ್ಟ್ರಪತಿ ಆಡಳಿತ ಆಳ್ವಿಕೆಗೆ ರಾಜ್ಯವು ಒಳಪಟ್ಟಿತ್ತು, ನಂತರ ಒಂದು ವಾರಗಳ ಕಾಲ ಭಾರತೀಯ ಜನತಾ ಪಕ್ಷದ ನಾಯಕ ಬಿ. ಎಸ್ ಯಡಿಯೂರಪ್ಪ ಅವರು ಒಂದು ವಾರಗಳ ಕಾಲ ಮುಖ್ಯಮಂತ್ರಿಯಾಗಿ, ವಿಶ್ವಾಸಮತ ಯಾಚನೆಯ ಸಮಯದಲ್ಲಿ ಜೆಡಿಎಸ್ ವಿರುದ್ಧ ಮತ ಚಲಾಯಿಸುವುದಕ್ಕೆ ಮುಂದಾದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ನಂತರ ನಡೆದ ರಾಜ್ಯದ ಪಕ್ಷಗಳಲ್ಲಿನ ಬೆಳವಣಿಗೆಗಳಲ್ಲಿ ಜೆಡಿಎಸ್, ಹಿರಿಯ ನಾಯಕ ಎಂ.ಪಿ ಪ್ರಕಾಶ್ ನೇತೃತ್ವದಲ್ಲಿ ವಿದಳವಾಗುತ್ತ ಸಾಗುತ್ತಿದ್ದರೆ. ಮಿತ್ರಪಕ್ಷವಾಗಿದ್ದ ಭಾರತೀಯ ಜನತಾಪಕ್ಷದಲ್ಲಿ ವಾರದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಆಂತರಿಕ ಭಿನ್ನಮತ ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರಿಂದ ವ್ಯಕ್ತವಾಗಿದೆ.
ಮತ್ತಷ್ಟು
ಪ್ರಕಾಶ್ -ವೀರೇಂದ್ರ ಮಾತುಕತೆ
ಬಂಡಾಯ ಬಣದಿಂದ ಗೌಡರ ಸಭೆ ಬಹಿಷ್ಕಾರ
ನಾಳಿನದು ಕಾರ್ಯಕಾರಿಣಿಯಲ್ಲ, ಬಹಿರಂಗ ಸಭೆ ಮಾತ್ರ: ಪ್ರಕಾಶ್
ಜೆಡಿಎಸ್ ಭಿನ್ನಮತೀಯ ಸಭೆಗೆ ಬಂಡೆಪ್ಪಾ,ಲಾಡ್
ಭೂ ಒತ್ತುವರಿ: ಶೀಘ್ರ ಜಂಟಿ ಸಮಿತಿ ಅಂತಿಮ ವರದಿ ಸಲ್ಲಿಕೆ
ಬಗೆಹರಿಯದ ದೇವದಾಸಿಯರ ಸಮಸ್ಯೆಗಳು