ಬುಧವಾರ ರಾತ್ರಿ ರಾಷ್ಟ್ತ್ರಪತಿ ಪ್ರತಿಭಾ ಪಾಟೀಲ್ ಅಂಕಿತ ಹಾಕುವುದರೊಂದಿಗೆ ಕರ್ನಾಟಕ ವಿಧಾನಸಭೆ ವಿಸರ್ಜನೆ ಯಾಗಿದೆ. ಈ ಕುರಿತ ಆದೇಶದ ಪ್ರತಿ ರಾಜ್ಯಪಾಲರಿಗೆ ರವಾನೆ ಯಾಗಿದೆ. ವಿಧಾನಸಭೆಯ ವಿಸರ್ಜನೆ ಕುರಿತ ತೀರ್ಮಾನವನ್ನು ಈ ತಿಂಗಳ 20ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು.
ರಾಜ್ಯದಲ್ಲಿ ರಾಷ್ಟ್ತ್ರಪತಿ ಆಳ್ವಿಕೆಯ ಉದ್ಘೋಷಣೆಗೆ ಸೋಮವಾರ ಸಂಸತ್ತಿನ ಉಭಯ ಸದನಗಳು ಅನುಮೋದನೆ ನೀಡಿದ್ದವು. ಈ ನಡುವೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಕಳೆದ ಮೂರು ದಿನಗಳ ದೆಹಲಿ ಭೇಟಿಯಲ್ಲಿ ಪ್ರಧಾನಿ ಮನಮೋಹನಸಿಂಗ್, ಗೃಹಸಚಿವ ಶಿವರಾಜಪಾಟೀಲ್, ಸಂಸದೀಯ ವ್ಯವಹಾರಗಳ ಸಚಿವ ಪ್ರಿಯರಂಜನ್ದಾಸ್ ಮುನ್ಷಿ ಹಾಗೂ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಭೇಟಿ ಮಾಡಿದ್ದರು. ರಾಜ್ಯ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುವ ಕಾಂಗ್ರೆಸ್ ವರಿಷ್ಠ ಪೃಥ್ವೀರಾಜ್ ಚವ್ಹಾನ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು.
ಅಮಾನತ್ತಿಲ್ಲಿದ್ದ ವಿಧಾನಸಭೆಯ ಸದಸ್ಯರ ಪೈಕಿ ಹೆಚ್ಚಿನವರು ಮಧ್ಯಂತರ ಚುನಾವಣೆ ಎದುರಿಸಲು ಸಿದ್ದಾರಾಗಿರಲಿಲ್ಲ. ಹಾಗಾಗಿ ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಿಸಿ, ನಂತರ ವಾಪಸ್ ಪಡೆದು ಬಿಜೆಪಿ ನೇತೃತ್ವದ ಸರ್ಕಾರ ಪತನವಾದನಂತರವೂ ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಬೆಸೆದು ಸಮ್ಮಿಶ್ರ ಸರ್ಕಾರ ರಚಿಸಲು ಜೆಡಿಎಸ್ ಬಂಡಾಯ ಶಾಸಕರು ಮಾಡಿದ ಪ್ರಯತ್ನವೂ ವಿಫಲವಾಗಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.
|