ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮೀಸಲಾತಿ: ಜನಪ್ರತಿನಿಧಿಗಳ ಪರದಾಟ
ರಾಜ್ಯದ 209 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕಟಗೊಂಡು ಸರಿಯಾಗಿ ಎರಡು ತಿಂಗಳು ಪೂರ್ಣಗೊಳ್ಳುತ್ತಾ ಬಂದಿದ್ದರೂ ಈವರೆಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿ ಮಾತ್ರ ಪ್ರಕಟಗೊಂಡಿಲ್ಲ. ಅಧಿಕಾರಶಾಹಿ ಪ್ರಬಲ ಲಾಬಿಯೇ ಇದಕ್ಕೆ ಪ್ರಮುಖ ಕಾರಣ.

ರಾಜ್ಯದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಪೂರ್ಣ ಪ್ರಯೋಜನ ಪಡೆದುಕೊಂಡ ನಗರಾಭಿವೃದ್ದಿ ಇಲಾಖೆಯ ಉನ್ನತ ಅಧಿಕಾರಗಳು ಮೀಸಲಾತಿ ಪಟ್ಟಿ ಸಿದ್ಧಪಡಿಸಿ ಪ್ರಕಟಿಸಲು ನಾನಾ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ವಿಳಂಬ ತಂತ್ರ ಅನುಸರಿಸುತ್ತಿದ್ದಾರೆ.

ಜನಪ್ರತಿನಿಧಿಗಳಿಲ್ಲದೆ ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಭಿವೃದ್ದಿ ಯೋಜನೆಗಳ ಬಗೆಗಿನ ನಿರ್ಧಾರಗಳನ್ನು ತಾವೇ ಕೈಗೊಳ್ಳಬಹುದು. ಆ ಮೂಲಕ ಸ್ಥಳೀಯ ಸಂಸ್ಥೆಗಳ ಮೇಲೆ ಪ್ರಭುತ್ವ ಸಾಧಿಸಬಹುದು ಎಂಬುದು ಅಧಿಕಾರ ಶಾಹಿಯ ವಿಳಂಬ ಧೊರಣೆಯ ಹಿಂದಿರುವ ಕಟುಸತ್ಯ ಎಂದು ಹೇಳಲೇಬೇಕಾಗಿದೆ.

ಕೂಡಲೇ ಮೀಸಲಾತಿ ಪಟ್ಟಿ ಪ್ರಕಟಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಬಗ್ಗೆ ಚುನಾವಣೆಯಲ್ಲಿ ಗೆದ್ದು ಎರಡು ತಿಂಗಳಾದರೂ ಅಧಿಕಾರವಿಲ್ಲದೆ ಪರದಾಡುತ್ತಿರುವ ಜನಪ್ರತಿನಿಧಿಗಳು ಗಂಭೀರ ಚಿಂತನೆ ನಡೆಸಿದ್ದಾರೆ. ಮೀಸಲಾತಿ ಪಟ್ಟಿ ಪ್ರಕಟಿಸಲು ಕನಿಷ್ಠ ಇನ್ನೂ 15ರಿಂದ 20 ದಿನಗಳ ಕಾಲವಾದರೂ ಬೇಕಾಗಬಹುದು ಎಂದು ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಸುಭಾಷ್ಚಂದ್ರ ಸ್ಪಷ್ಟಪಡಿಸಿದ್ದಾರೆ.

ಜನಪ್ರತಿನಿಧಿಗಳ ಸರ್ಕಾರ ಅಸ್ತಿತ್ವದಲ್ಲಿ ಇದ್ದಿದ್ದರೆ ಸಚಿವ ಸಂಪುಟದ ಅನುಮತಿ ಬೇಕಾಗುತ್ತಿತ್ತು. ಆದರೆ, ರಾಷ್ಟ್ರಪತಿ ಆಳ್ವಿಕೆ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಲಹೆಗಾರರನ್ನು ನೇಮಿಸಿಕೊಂಡ ನಂತರ ಮೀಸಲಾತಿ ಪಟ್ಟಿ ಸಿದ್ಧ ಪಡಿಸುವ ಪ್ರಕ್ರಿಯೆಗೆ ಒಪ್ಪಿಗೆ ನೀಡಬಹುದು.
ಮತ್ತಷ್ಟು
ಪರ್ಯಾಯ ವಿವಾದ: ಸಂಧಾನ ವಿಫಲ
ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ಗೈರುಹಾಜರಾದ ಭಿನ್ನಮತೀಯರು
ಅಂತೂ ಇಂತೂ ವಿಧಾನಸಭೆ ವಿಸರ್ಜನೆ
ವಿಧಾನಸಭೆ ಸ್ಪೀಕರ್ ಹುದ್ದೆ ಅಬಾಧಿತ
ಜೆಡಿಎಸ್ ಕಾರ್ಯಕಾರಿಣಿಯಲ್ಲಿ ದತ್ತ ಸಂಭ್ರಮ
ಬಿಜೆಪಿ: ಸಾಮೂಹಿಕ ನಾಯಕತ್ವಕ್ಕೆ ಭಿನ್ನಮತೀಯರ ಒಲವು