ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಷ್ಟ್ತ್ರಪತಿ ಆಡಳಿತವಿದ್ದರೂ ವಿಧಾನಪರಿಷತ್ ಅಧಿವೇಶನ
ರಾಜ್ಯ ವಿಧಾನಪರಿಷತ್ ಸದಸ್ಯರಿಗೊಂದು ಸಂತೋಷದ ಸುದ್ದಿ. ರಾಜ್ಯದಲ್ಲಿ ರಾಷ್ಟ್ತ್ರಪತಿ ಆಡಳಿತವಿದ್ದರೂ ವಿಧಾನಪರಿಷತ್ ಕಲಾಪ ನಡೆಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಪರಿಷತ್ತಿನ ಎರಡು ಅಧಿವೇಶನಗಳ ನಡುವಣ ಅವಧಿ 6 ತಿಂಗಳನ್ನು ಮೀರಿದಲ್ಲಿ ರಾಷ್ಟ್ತ್ರಪತಿ ಆಡಳಿತದಲ್ಲೂ ಸಹಾ ವಿಧಾನಪರಿಷತ್ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಅಧಿಕಾರ ನಿಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ.

ಇದರೊಂದಿಗೆ ವಿಧಾನಪರಿಷತ್ತಿನ ಐದು ಸದನ ಸಮಿತಿಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಬಹುದಾಗಿದೆ.

ವಿಧಾನಪರಿಷತ್ ಸದಸ್ಯರು ತಮ್ಮ ಹಕ್ಕುಗಳನ್ನು ಚಲಾಯಿಸುವುದರೊಂದಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಭಾಗವಹಿಸಬಹುದು.

ವಿಧಾನಪರಿಷತ್ ಸಭಾಪತಿ ಪ್ರೊ.ಬಿ.ಕೆ. ಚಂದ್ರಶೇಖರ್ ಅವರು ಇತ್ತೀಚಿಗೆ ತಮ್ಮ ನೇತೃತ್ವದಲ್ಲಿ ನಾನಾ ಪಕ್ಷಗಳ ಸಭಾನಾಯಕರ ನಿಯೋಗವೊಂದನ್ನು ದೆಹಲಿಗೆ ಕೊಂಡೊಯ್ದು, ಗೃಹಸಚಿವ ಶಿವರಾಜಪಾಟೀಲ್ ಅವರಿಗೆ ರಾಷ್ಟ್ತ್ರಪತಿ ಆಡಳಿತದಲ್ಲಿ ವಿಧಾನಪರಿಷತ್ ನಲುಗಬೇಕಾಗಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.

ಇದರ ಪರಿಣಾಮವಾಗಿ ರಾಷ್ಟ್ತ್ರಪತಿ ಆಡಳಿತದಡಿ ತನ್ನ ವ್ಯಾಪ್ತಿಯ ಚುಟುವಟಿಕೆಗಳನ್ನು ಮುಂದುವರೆಸುವ ದೇಶದ ಮೊಟ್ಟ ಮೊದಲ ಮೇಲ್ಮನೆ ಕರ್ನಾಟಕದ್ದಾಗಲಿದೆ. ಇದನ್ನುಕಂಡ ಇತರ ವಿಧಾನಪರಿಷತ್ ಅಸ್ತಿತ್ವದಲ್ಲಿ ಇಲ್ಲದ ರಾಜ್ಯಗಳೂ ಸಹಾ ವಿಧಾನಪರಿಷತ್‌ಗಳನ್ನು ಸ್ಥಾಪಿಸಿಕೊಳ್ಳಲು ಮುಂದಾಗುವ ಸಾಧ್ಯತೆ ಇದೆ.
ಮತ್ತಷ್ಟು
ಪುತ್ತಿಗೆ ಶ್ರೀಗಳ ಶ್ರೀಕೃಷ್ಣ ಪೂಜೆ ಶಾಸ್ತ್ತ್ರೀಯ ದೃಷ್ಟಿಯಿಂದ ನಿಷಿದ್ಧ
ಬೆಂಗಳೂರಿಗರಿಗೊಂದು ಬೊಂಬಾಟ್ ಹಬ್ಬ
ಎಂ.ಪಿ.ಪ್ರಕಾಶ್‌ರಿಂದ ಪಕ್ಷ ತೊರೆಯುವ ಇಂಗಿತ
ಸಂಚುಗಳ ಬಗ್ಗೆ ಪುಸ್ತಕ ಬರೆಯುವೆ: ದೇವೇಗೌಡ
ಮೀಸಲಾತಿ: ಜನಪ್ರತಿನಿಧಿಗಳ ಪರದಾಟ
ಪರ್ಯಾಯ ವಿವಾದ: ಸಂಧಾನ ವಿಫಲ