ಮುಂದಿನ ನಡೆಯ ಕುರಿತು ಒಂದೇ ದಿನದಲ್ಲಿ ನಿರ್ಧಾರ ತೆಗೆದುಕೊಳ್ಳಲು ಇದು ಸಿನಿಮಾ ಅಥವಾ ಧಾರಾವಾಹಿಯ ಚಿತ್ರೀಕರಣವಲ್ಲ - ಇದು ಕುಮಾರಣ್ಣನ ಹೇಳಿಕೆಗೆ ಪ್ರಕಾಶ್ ಪ್ರತಿಕ್ರಿಯಿಸಿದ ರೀತಿ.
ಪಕ್ಷ ಬಿಡುವುದಿದ್ದರೆ ಪ್ರಕಾಶ್ ಒಂದೇ ದಿನದಲ್ಲಿ ತೀರ್ಮಾನ ತೆಗೆದುಕೊಳ್ಳಲಿ ಎಂಬ ಕುಮಾರಸ್ವಾಮಿಯವರ ಮಾತಿಗೆ ಪ್ರತಿಕ್ರಿಯಿಸಿದ ಪ್ರಕಾಶ್ ಮುಂದುವರೆದು, ಬೇಕಿದ್ದರೆ ಶಿಸ್ತುಕ್ರಮ ಕೈಗೊಳ್ಳಲಿ ಎಂದು ಹೇಳುವ ಮೂಲಕ ಬಂಡಾಯದ ಬರಹಕ್ಕೆ ಹೊಸ ಭಾಷ್ಯ ಬರೆದರು.
ವಾಸ್ತವವಾಗಿ ನಾನು ಭಿನ್ನಮತ ತೋರಿದ ನಂತರವೇ ಪಕ್ಷದ ಶಾಸಕರು, ಜಿಲ್ಲಾ ಘಟಕದ ಅಧ್ಯಕ್ಷರಿಗೆ ಮರ್ಯಾದೆ ಸಿಗುತ್ತಿದೆ. ಪಕ್ಷದ ನಾಯಕರೆನಿಸಿಕೊಂಡವರು ಅವರನ್ನು ನಿರಂತರ ಸಂಪರ್ಕಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಒಂದು ರೀತಿಯಲ್ಲಿ ಇದನ್ನು ಉತ್ತಮ ಬೆಳವಣಿಗೆ ಎನ್ನಬಹುದಲ್ಲವೇ ಎಂದು ಪ್ರಕಾಶ್ ಈ ಸಂದರ್ಭದಲ್ಲಿ ಪ್ರಶ್ನಿಸಿದರು.
ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ ಪ್ರಕಾಶ್ ತಮಗೆ ಬೇಕಾದವರನ್ನೆಲ್ಲಾ ನೇಮಿಸಿದರು ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಪ್ರಕಾಶ್, ಇಲ್ಲಿ ನನ್ನ ಬೆಂಬಲಿಗರು ಮಾತ್ರವಲ್ಲದೇ ದೇವೇಗೌಡರ ಬೆಂಬಲಿಗರಿಗೂ ಸ್ಥಾನವಿತ್ತು; ಅಷ್ಟೇ ಅಲ್ಲದೆ ಪಕ್ಷದ ವಕ್ತಾರ ವೈ.ಎಸ್.ವಿ.ದತ್ತಾ ಕೂಡ ಜತೆಯಲ್ಲಿದ್ದರು ಎಂದು ಹೇಳುವ ಮೂಲಕ ಲಘುವಾಗಿ ತಿರುಗೇಟು ನೀಡಿದರು.
|