ಕನ್ನಡ ಭಾಷೆಗೆ ಶಾಸ್ತ್ತ್ರೀಯ ಸ್ಥಾನಮಾನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದಕ್ಕಾಗಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ರಾಜಭವನದ ಮುಂದೆ ಪ್ರತಿಭಟನೆ ನಡೆಸಿದರು.
ಹಲವು ಬಾರಿ ಒತ್ತಾಯ ಮಾಡಿದಾಗಲೂ ಸಹ ಸಂಬಂಧಪಟ್ಟವರು ಈ ಕುರಿತು ಯಾವುದೇ ತೀರ್ಮಾನವನ್ನು ಕೈಗೊಳ್ಳುತ್ತಿಲ್ಲ. ವಿನಾಕಾರಣ ವಿಳಂಬನೀತಿ ಅನುಸರಿಸಲಾಗುತ್ತಿದೆ. ಇದನ್ನು ಪ್ರತಿಭಟಿಸಲು ಇಂದು ಬೆಂಗಳೂರಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಾಟಾಳ್ ತಿಳಿಸಿದರು.
ಕರ್ನಾಟಕ ಅಭಿವೃದ್ದಿ, ಬೆಳವಣಿಗೆ ಹಾಗೂ ಅದರ ಕುರಿತಾದ ಚಿಂತನೆಗಳೆಡೆಗೆ ಗಮನ ಸೆಳೆಯಲು ಇಂದಿನಿಂದ ಪ್ರಾರಂಭವಾಗಿ ಜನವರಿ 27ರವರೆಗೆ ರಾಜ್ಯಾದ್ಯಂತ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದೂ ಈ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ತಿಳಿಸಿದರು.
|