ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಮಸ್ವಾಮಿ ಕಾರ್ಯವೈಖರಿ ಪ್ರಜಾಪ್ರಭುತ್ವ ವಿರೋಧಿ: ಉಗ್ರಪ್ಪ
ಸದನದ ಸದಸ್ಯತ್ವ ರದ್ದಾದ ಮೇಲೆ ಅಥವಾ ಕಳಕೊಂಡ ಮೇಲೆ, ಅಧಿಕಾರಿಗಳನ್ನು ಕರೆಸಿಕೊಂಡು ದಾಖಲೆಗಳನ್ನು ಬದಲಿಸುವ ಅಥವಾ ತಿದ್ದುವ ಪ್ರಯತ್ನವೇ ಪ್ರಜಾಪ್ರಭುತ್ವ ವಿರೋಧಿ. ಹೀಗೆಂದವರು ನಿನ್ನೆ ಸಭಾಧ್ಯಕ್ಷರ ಕಾರ್ಯಾಲಯದಲ್ಲಿ ಉಗ್ರಪ್ರತಾಪವನ್ನು ಮೆರೆದ ಉಗ್ರಪ್ಪ.

ನಿನ್ನೆ ನಡೆದ ದಾಂಧಲೆ ಕುರಿತು ಸ್ಪಷ್ಟೀಕರಣವನ್ನು ನೀಡುತ್ತಿದ್ದ ಅವರು, ಪ್ರಜಾಪ್ರಭುತ್ವದಲ್ಲಿ ಕಾನೂನು, ಸಂವಿಧಾನ ಹಾಗೂ ಕೆಲವೊಂದು ಕಟ್ಟುಪಾಡುಗಳಿವೆ. ಇದನ್ನು ಎ.ಟಿ.ರಾಮಸ್ವಾಮಿ ಹಾಗೂ ಸ್ಪೀಕರ್ ಇಬ್ಬರೂ ಗಮನಿಸಬೇಕು. ರಾಜ್ಯದಲ್ಲಿ ಎರಡು ಬಾರಿ ಸದನವನ್ನು ಅಮಾನತಿನಲ್ಲಿಡಲಾಗಿದೆ. ಈ ಎರಡೂ ಸಂದರ್ಭಗಳಲ್ಲೂ ಶಾಸಕರು ತಮಗಿರುವ ಅಧಿಕಾರವನ್ನು ಚಲಾಯಿಸುವಂತಿಲ್ಲ ಎಂದು ಸ್ಪಷ್ಟ ನಿರ್ದೇಶನವನ್ನು ನೀಡಲಾಗಿದೆ ಎಂಬ ಅಂಶವನ್ನು ಹೊರಗೆಡವಿದರು.

ಹೀಗಿದ್ದರೂ ಸಹ ಕಡತಗಳನ್ನು ಮನೆಗಳಲ್ಲಿ ಅಥವಾ ತಮಗಿಷ್ಟ ಬಂದ ಕಡೆಗಳಲ್ಲಿ ಹೇಗೆ ಇಟ್ಕೋತಾರೆ? ಅಷ್ಟೇ ಅಲ್ಲದೆ ಕಚೇರಿ ಕೆಲಸದ ಅವಧಿ ಮುಗಿದ ನಂತರವೂ ಒಂದಷ್ಟು ಅಧಿಕಾರಿಗಳನ್ನು ಸೇರಿಸಿಕೊಂಡು, ಬಾಗಿಲು ಹಾಕಿಕೊಂಡು ದಾಖಲೆ ತಿದ್ದುವುದು ಅಥವಾ ಬದಲಿಸುವುದು ಕಾನೂನು ಬಾಹಿರ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಉಗ್ರಪ್ಪ, ಇದು ರಾಜಕೀಯ ವಿರೋಧಿಗಳನ್ನು ಮುಗಿಸುವ ಷಡ್ಯಂತ್ರವಷ್ಟೇ ಎನ್ನಲು ಮರೆಯಲಿಲ್ಲ.
ಮತ್ತಷ್ಟು
ರಾಮಸ್ವಾಮಿ ವಿರುದ್ಧ ಉಗ್ರಪ್ರತಾಪ: ಪೊಲೀಸರಿಗೆ ದೂರು
ನನಗೆ ಯಾರದೂ ಮುಲಾಜಿಲ್ಲ : ಯಡಿಯೂರಪ್ಪ
ಕನ್ನಡಕ್ಕೆ ದಕ್ಕದ ಸ್ಥಾನಮಾನ : ವಾಟಾಳ್ ಪ್ರತಿಭಟನೆ
ಮರಳಿ ಬನ್ನಿ : ಪ್ರಕಾಶ್‌ಗೆ ಜೆಡಿ(ಯು) ಆಹ್ವಾನ
ರಾಜಕೀಯ ಸಿನಿಮಾ ಅಲ್ಲ: ಎಂ.ಪಿ.ಪ್ರಕಾಶ್
ಸಂಚಾರ ದಟ್ಟಣೆ ಕಡಿವಾಣಕ್ಕೆ ವಿನೂತನ ಕ್ರಮ