ದೊಡ್ಡ ದೊಡ್ಡ ಬಲೂನುಗಳಿಗೆ ಗಾಳಿ ತುಂಬಿಸಲು ಬಳಸುವ ಸಿಲಿಂಡರ್ ಸ್ಪೋಟಗೊಂಡು ಒಬ್ಬನ ಸಾವಿಗೆ ಕಾರಣವಾದ ದಾರುಣ ಘಟನೆ ನಗರದಲ್ಲಿ ಸಂಭವಿಸಿದೆ.
ನಗರದ ಅವೆನ್ಯೂ ರಸ್ತೆಯ ಚರ್ಚ್ ಸಮೀಪದ ಮೈದಾನದಲ್ಲಿ ಬಲೂನಿಗೆ ಗಾಳಿ ತುಂಬಿಸುವಾಗ ಈ ದುರ್ಘಟನೆ ಸಂಭವಿಸಿದ್ದು ಈ ಕುರಿತು ಅಲಸೂರು ಗೇಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯವರ ಸಮಾವೇಶ ಆಯೋಜಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಇದರಲ್ಲಿ ಬಳಸುವ ದೊಡ್ಡ ಬಲೂನುಗಳಿಗೆ ಗಾಳಿ ತುಂಬಿಸುವ ಬೃಹತ್ ಬೇಡಿಕೆಯನ್ನು ಪೂರೈಸುವಾಗ ಇದು ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ.
|