ಹಾಸನದ ರಸ್ತೆಗಳ ಅಭಿವೃದ್ದಿ ಕಾಮಗಾರಿಗೆಂದು ಮಂಜೂರಾದ ಸುಮಾರು 6 ಕೋಟಿ ಹಣ ಎಲ್ಲಿ ಹೋಯಿತು? ಈ ರೇವಣ್ಣನ ಲಂಚಾವತಾರ ಪರಮಾವಧಿಗೆ ಮುಟ್ಟಿದೆ, ಹಾಸನದ ರಸ್ತೆಗಳ ದುರವಸ್ಥೆಯನ್ನು ನೋಡಿದರೆ ಅದಕ್ಕೆ ಮಂಜೂರಾದ ಹಣ ರೇವಣ್ಣನ ಕುಟುಂಬದ ಅಭಿವೃದ್ದಿಗೆ ಹೋಗಿದೆಯೇ? ಎಂದು ನೇರವಾಗಿ ಪ್ರಶ್ನಿಸಿದರು. ಸೌಜನ್ಯ ಶಬ್ದದ ಅರ್ಥವೇ ಗೊತ್ತಿಲ್ಲದ ರೇವಣ್ಣ ಮತ್ತು ದೇವೇಗೌಡರ ಕುಟುಂಬವನ್ನು ತೀವ್ರವಾಗಿ ಜನಜಾಗೃತಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪನವರು ದುಡ್ಡು ಮಾಡುವುದೇ ಜೀವನವೆಂದು ತಿಳಿದ ಕುಟುಂಬದಿಂದ ನಾವು ಪಾಠವನ್ನು ಕಲಿಯುವ ಅವಶ್ಯಕತೆಯೇನು ಇಲ್ಲ ಎಂದು ಖಾರವಾಗಿ ನುಡಿದಿದ್ದಾರೆ
ಬಿಜೆಪಿಯ ಜನಜಾಗೃತಿ ಯಾತ್ರೆಯಲ್ಲಿ ಮಾತನಾಡಿದ ಯಡಿಯೂರಪ್ಪನವರು ದೇವೇಗೌಡರನ್ನು ಸುಳ್ಳಿನ ಸರದಾರನೆಂದು ಜರೆದು, ಸಮಾವೇಶದುದ್ದಕ್ಕೂ ದೇವೇಗೌಡರ ಕುಟುಂಬದ ಮೇಲೆ ಹರಿಹಾಯ್ದ ಯಡಿಯೂರಪ್ಪನವರು ಹಿಡಿ ಹಿಡಿ ಶಾಪಗಳ ಸುರಿಮಳೆಯನ್ನೇ ಸುರಿದಿದ್ದಾರೆ. ಇತ್ತೀಚೆಗೆ ದೇವೇಗೌಡರು ಮಂಗಳೂರಿನ ಕೋಮು ಗಲಭೆ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಸಾಂತ್ವನ ಹೇಳಲಿಕ್ಕೆ ಹೋಗಿದ್ದಾಗ ಯಡಿಯೂರಪ್ಪನವರು ಗೆಸ್ಟ್ ಹೌಸ್‌ನಲ್ಲಿ ರೆಸ್ಟ್ ತಗೊಳ್ತಿದ್ದರು ಎಂದು ಲೇವಡಿ ಮಾಡಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ದೇವೇಗೌಡರ ಟೀಕೆಗೆ ಮರು ಟೀಕೆ ಮಾಡಿದ ಯಡಿಯೂರಪ್ಪನವರು ಯಾರಾದರೂ ಅತ್ಯುತ್ತಮ ಸುಳ್ಳಿಗೆ ಪ್ರಶಸ್ತಿ ಕೊಡಬಯಸುವುದಾದರೆ ಸುಳ್ಳಿನ ಸರದಾರ ದೇವೇಗೌಡರೇ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಜರೆದರು.
ನಡೆದಾಡುವ ದೇವರೆಂದೇ ಹೆಸರಾದ ಶಿವಕುಮಾರ ಸ್ವಾಮಿಗಳ ಒಂದು ದಿನದ ಪುಣ್ಯದ ಕಾಲು ಭಾಗದಷ್ಟೂ ವಯಸ್ಸಾಗಿರದ ಕುಮಾರಸ್ವಾಮಿ, ಶಿವಕುಮಾರ ಶ್ರೀಗಳಿಗೆ ಹಿತವಚನ ಹೇಳ ಹೊರಟಿರುವುದು ಉದ್ಧಟತನದ ಪರಮಾವಧಿ ಎಂದು ಏಕವಚನದಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಮೇಲೆ ಸಭೆಯಲ್ಲಿ ಹರಿ ಹಾಯ್ದರು.
|