ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಭೂ ವಿವಾದದ ತೆಕ್ಕೆಗೆ ಸಂಸದೆ ತೇಜಸ್ವಿನಿ
ಬೆಂಗಳೂರಿನ ಸುತ್ತಮುತ್ತಲಿನ ಭೂಮಿಯ ಬೆಲೆ ಗಗನಕ್ಕೇರುತ್ತಿರುವುದರ ಜತೆ ಜತೆಗೇ ಇಲ್ಲಿನ ಭೂವಿವಾದದ ಪ್ರಮಾಣವೂ ಹೆಚ್ಚುತ್ತಲೇ ಇದೆ. ಇದಕ್ಕೊಂದು ತಾಜಾ ಉದಾಹರಣೆ ಸಂಸದೆ ತೇಜಸ್ವಿನಿಯವರಿಗೆ ಸಂಬಂಧಿಸಿದ ಸೈಟ್ ವಿವಾದ.

ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿ ತಮ್ಮ ಸೋದರ ಚಂದ್ರಶೇಖರ್ ಹೆಸರಿನಲ್ಲಿದ್ದ ಜಮೀನಿನಲ್ಲಿ ವಿನ್ಸೆಂಟ್ ಡಿಸೋಜಾ ಎಂಬುವವರು ಅಕ್ರಮವಾಗಿ ಮನೆ ಕಟ್ಟಿದ್ದಾರೆ. ಜತೆಗೆ ಅಂಧ್ರದ ಮೂವರು ಬಿಲ್ಡರ್‌ಗಳು ನಕಲಿ ದಾಖಲೆ ಸೃಷ್ಟಿಸಿ ನಿರ್ಮಾಣ ಮಾಡಿದ್ದಾರೆ. ಈ ಕುರಿತು ಬೆಂಗಳೂರಿನ ಮೇಯರ್, ಕಮೀಷನರ್ ಅವರಿಗೆ ದೂರು ನೀಡಿ ನೀಡಿ ಸಾಕಾಗಿದೆ. ಆದರೆ ನ್ಯಾಯ ಸಿಕ್ಕಿಲ್ಲ. ತಾವು ವಿಐಪಿಯಾಗಿರುವುದೇ ತಮಗೆ ಮುಳುವಾಗಿರುವಂತಿದೆ. ಅಕ್ರಮ ನಿರ್ಮಾಣದ ಕುರಿತು ಡಿಸೋಜಾರನ್ನು ಪ್ರಶ್ನಿಸಿದಾಗ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂಬುದು ಸಂಸದೆ ತೇಜಸ್ವಿನಿಯವರ ಆರೋಪ.

ಈ ಕುರಿತು ಡಿಸೋಜಾರವರು ಹೇಳುವುದೇ ಬೇರೆ. ತೇಜಸ್ವಿನಿಯವರು ಜಿಪಿಎ ಮಾಡಿಕೊಟ್ಟವರೊಬ್ಬರಿಂದ ಜಮೀನು ಖರೀದಿಸಿರುವುದಾಗಿ ಹೇಳುತ್ತಾರೆ. ಅದರೆ ನಾವು 2006ರಲ್ಲೇ ಈ ಕಾರ್ಪೊರೇಷನ್ ಸೈಟ್ ಅನ್ನು ಖರೀದಿಸಿದ್ದೇವೆ. ಇನ್ನು ಅವರ ಮೇಲೆ ಹಲ್ಲೆ ಮಾಡಿರುವುದಂತೂ ಸತ್ಯಕ್ಕೆ ದೂರ. ಸಾಮಾನ್ಯ ಜನರಾದ ನಾವು ಒಬ್ಬ ಎಂ.ಪಿ.ಮೇಲೆ ಹಲ್ಲೆ ಮಾಡುವುದು ಸಾಧ್ಯವೇ? ವಿವೇಕಿಗಳ್ಯಾರೂ ಇಂಥ ಕೆಲಸಕ್ಕೆ ಕೈಹಾಕುವುದಿಲ್ಲ ಎಂಬುದು ಡಿಸೋಜಾರವರ ವಿವರಣೆ.

ಒಟ್ಟಿನಲ್ಲಿ ಸತ್ಯಾಂಶವೇನು ಎಂಬುದು ತನಿಖೆಯಿಂದಲೇ ಹೊರಬರಬೇಕಿದೆ.
ಮತ್ತಷ್ಟು
ಇಲ್ಲಿರಲಾರೆ; ಅಲ್ಲಿಗೆ ಹೋಗಲಾರೆ : ಎಂ.ಪಿ.ಪ್ರಕಾಶ್
ಸಂಪ್ರದಾಯಕ್ಕೆ ಬದ್ಧ - ಪೇಜಾವರ ಶ್ರೀ
ದುಡ್ಡು ಮಾಡುವುದೇ ಗೌಡ ಕುಟುಂಬದ ಜೀವನ: ಯಡ್ಡಿ
ಕನ್ನಡ ಮನಸುಗಳನ್ನು ಮುದಗೊಳಿಸಿದ ನುಡಿಸಿರಿಗೆ ಪರದೆ
ಮರಳಿ ಗೂಡಿಗೆ ವಿಜಯ ಸಂಕೇಶ್ವರ್
ಬಿಎಸ್‌ಪಿಯತ್ತ ಪ್ರಕಾಶ ಚಿತ್ತ ?