ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನನ್ನ ಜಂಘಾಬಲವಿನ್ನೂ ಉಡುಗಿಲ್ಲ : ದೇವೇಗೌಡ
ಸಮಾನ ಮನಸ್ಕರೆಲ್ಲ ಸೇರಿ ಸಭೆ ಮಾಡಿದ ಮಾತ್ರಕ್ಕೆ ನನ್ನ ಜಂಘಾಬಲವೇನೂ ಉಡುಗಿಲ್ಲ. ಅದನ್ನು ಮುಂಬರುವ ಚುನಾವಣೆಯಲ್ಲಿ ತೋರಿಸುತ್ತೇನೆ - ಇದು ಜೆಡಿಎಸ್ ವರಿಷ್ಠ ದೇವೇಗೌಡರ ಗುಡುಗು.

ಅವರೆಲ್ಲ ಸಭೆ ನಡೆಸಲಿ, ಪಕ್ಷ ತೊರೆಯಬೇಕೆಂದಿದ್ದರೆ ಬೇಗ ತೊರೆಯಲಿ. ನಾನು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುವವನಲ್ಲ ಎಂದು ಗುಟುರು ಹಾಕಿರುವ ಗೌಡರು, ವಿಧಾನಸಭೆ ವಿಸರ್ಜನೆಯಾದಾಗಲೆಲ್ಲ ಪಕ್ಷ ಬಿಡುವಿಕೆ - ಸೇರುವಿಕೆ ಮಾಮೂಲು. ಇಂಥದ್ದನ್ನೆಲ್ಲ ನಾನು ಸಾಕಷ್ಟು ನೋಡಿದ್ದೇನೆ. ಹಾಗಾಗಿ ನನ್ನ ಮನೋಸ್ಥೈರ್ಯವೇನೂ ಕುಂದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಈ ತಿಂಗಳ 7ರಂದು ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿದ ನಂತರ ರಾಜ್ಯದಾದ್ಯಂತ ಪ್ರವಾಸ ನಡೆಸಿ ಮುಂಬರಲಿರುವ ಚುನಾವಣೆಗಾಗಿ ಪಕ್ಷವನ್ನು ಸನ್ನದ್ಧಗೊಳಿಸಲಾಗುವುದು ಎಂದು ಗೌಡರು ಈ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಜಿ.ಟಿ. ದೇವೇಗೌಡ ಬಿಜೆಪಿಗೆ?
ಜವಾಬ್ದಾರಿ ಹೊರಲು ಕೃಷ್ಣ ಆಸಕ್ತಿ?
ಕೆಪಿಸಿಸಿ ಪುನಾರಚನೆ: ದೆಹಲಿಗೆ ಶಾಸಕರ ದಂಡು
ಭೂ ವಿವಾದದ ತೆಕ್ಕೆಗೆ ಸಂಸದೆ ತೇಜಸ್ವಿನಿ
ಇಲ್ಲಿರಲಾರೆ; ಅಲ್ಲಿಗೆ ಹೋಗಲಾರೆ : ಎಂ.ಪಿ.ಪ್ರಕಾಶ್
ಸಂಪ್ರದಾಯಕ್ಕೆ ಬದ್ಧ - ಪೇಜಾವರ ಶ್ರೀ