ತಮ್ಮ ಪಕ್ಷದ ಪ್ರಾಬಲ್ಯವಿದ್ದ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡುವಾಗ ಯಡಿಯೂರಪ್ಪನವರು ದೇವೇಗೌಡ ಮತ್ತು ಅವರ ಮಕ್ಕಳ ಬಗ್ಗೆ ಮಾಡಿರುವ ಕಟು ಟೀಕೆಗಳು ಮಾಜಿ ಸಚಿವ ಎಚ್.ಡಿ.ರೇವಣ್ಣನವರನ್ನು ಕೆರಳಿಸಿವೆ.
ಜೆಡಿಎಸ್ ಮುಖಂಡರ ವಿರುದ್ಧ ಸುಳ್ಳು ಭ್ರಷ್ಟಾಚಾರ ಆರೋಪಗಳನ್ನು ಹೊರಿಸುವುದನ್ನು ನಿಲ್ಲಿಸದಿದ್ದರೆ ಯಡಿಯೂರಪ್ಪನವರ ಜನ್ಮ ಜಾಲಾಡುವುದಾಗಿ ರೇವಣ್ಣ ಹೂಂಕರಿಸಿದ್ದಾರೆ.
ಕುಮಾರಸ್ವಾಮಿಯವರೊಂದಿಗೆ ಅಧಿಕಾರ ಹಂಚಿಕೊಳ್ಳುವಾಗ ಕಾಣದಿದ್ದ ಭ್ರಷ್ಟಾಚಾರ ಅಧಿಕಾರ ಹೋದ ಮೇಲೆ ಕಂಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ರೇವಣ್ಣ, ಸೈಕಲ್ ಖರೀದಿಗೆ ಸಂಬಂಧಿಸಿ ತಾವು ಮಾಡಿದ ಆರೋಪಕ್ಕೆ ಯಡಿಯೂರಪ್ಪ ತಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಧೈರ್ಯವಿದ್ದರೆ ಅವರು ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ತಿರುಗೇಟು ನೀಡಿದರು.
|