ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ
ವೃತ್ತಿಪರ ಕೋರ್ಸ್‌‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ)ಯು 2008ರ ಏಪ್ರಿಲ್ 19 ಮತ್ತು 20ರಂದು ನಡೆಸಲು ಪ್ರಾಧಿಕಾರ ನಿರ್ಧರಿಸಿದೆ.

ಏಪ್ರಿಲ್ 19ರಂದು ಬೆಳಿಗ್ಗೆ 10ರಿಂದ ಮಧ್ನಾಹ್ನ 12.30ರವರೆಗೆ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಮಧ್ನಾಹ್ನ 2ರಿಂದ 3.20ರ ವರೆಗೆ ಗಣಿತ ಶಾಸ್ತ್ರ, ಸಂಜೆ 4ರಿಂದ 5.20ರವರೆಗೆ ಜೀವಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿವೆ.

ಏಪ್ರಿಲ್ 20ರಂದು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಬೆಳಿಗ್ಗೆ 11ರಿಂದ ಹಾಗೂ ಹೊರನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಮಧ್ನಾಹ್ನ 1ಗಂಟೆಗೆ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹದ ನಿರ್ದೇಶಕ ಎಸ್.ಜಿ. ಹೆಗಡೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಸಿಇಟಿ ಪರೀಕ್ಷೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಒಳಗೊಂಡ ಕೈಪಿಡಿ ಸಿಇಟಿ-2008 ಅನ್ನು ಪ್ರಾಧಿಕಾರ ಸದ್ಯದಲ್ಲಿಯೇ ಬಿಡುಗಡೆ ಮಾಡಲಿದೆ ಹಾಗೂ http://kea.kar.nic.in ವೆಬ್‌‌ಸೈಟ್‌‌ನಲ್ಲೂ ಲಭ್ಯವಾಗಲಿದೆ.
ಮತ್ತಷ್ಟು
ಯಡ್ಡಿ ಸುಮ್ಮನಿರದಿದ್ದರೆ ಜನ್ಮಜಾಲಾಡುವೆ: ರೇವಣ್ಣ
ನನ್ನ ಜಂಘಾಬಲವಿನ್ನೂ ಉಡುಗಿಲ್ಲ : ದೇವೇಗೌಡ
ಜಿ.ಟಿ. ದೇವೇಗೌಡ ಬಿಜೆಪಿಗೆ?
ಜವಾಬ್ದಾರಿ ಹೊರಲು ಕೃಷ್ಣ ಆಸಕ್ತಿ?
ಕೆಪಿಸಿಸಿ ಪುನಾರಚನೆ: ದೆಹಲಿಗೆ ಶಾಸಕರ ದಂಡು
ಭೂ ವಿವಾದದ ತೆಕ್ಕೆಗೆ ಸಂಸದೆ ತೇಜಸ್ವಿನಿ