ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಡಾ|| ಸುಬ್ರಮಣಿಯನ್ ಸ್ವಾಮಿ ಬಿಜೆಪಿಗೆ?
ಒಂದು ಕಾಲಕ್ಕೆ ಒಂದೇ ಮೂಲಕ್ಕೆ ಸೇರಿದ್ದ ಜನತಾಪಕ್ಷ ಹಾಗೂ ಬಿಜೆಪಿ ಮತ್ತೆ ಒಂದಾಗಲಿವೆಯೇ? ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡಿದರೆ ಆ ದಿನಗಳೂ ದೂರವಿಲ್ಲ ಎನಿಸುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಜನತಾ ಪಕ್ಷದ ಮುಖಂಡ ಡಾ|| ಸುಬ್ರಮಣಿಯನ್ ಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ.

ಪ್ರಸಕ್ತ ರಾಜಕೀಯ ವಿದ್ಯಮಾನಗಳು ಈ ಚರ್ಚೆಯಲ್ಲಿ ಹಾದುಹೋಗಿದ್ದು ಪಕ್ಷ ವೀಲೀನದೆಡೆಗೆ ಸಹಮತ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ತಾವೂ ಸಹ ಮೂಲತಃ ಜನಸಂಘದವರೇ ಅಗಿದ್ದು ಜನತಾಪಕ್ಷ ಹಾಗೂ ಬಿಜೆಪಿಯ ತತ್ವ ಸಿದ್ದಾಂತಗಳಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ಹೀಗಾಗಿ ವೀಲೀನ ಕಷ್ಟವಾಗಲಾರದು ಎಂಬ ಅಭಿಮತವನ್ನು ಡಾ|| ಸ್ವಾಮಿ ಸುದ್ದಿಗಾರರೊಂದಿಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ನಮ್ಮ ಪಕ್ಷಕ್ಕೆ ಬನ್ನಿ ಪ್ರಕಾಶ್: ಬಂಗಾರಪ್ಪ
ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ
ಯಡ್ಡಿ ಸುಮ್ಮನಿರದಿದ್ದರೆ ಜನ್ಮಜಾಲಾಡುವೆ: ರೇವಣ್ಣ
ನನ್ನ ಜಂಘಾಬಲವಿನ್ನೂ ಉಡುಗಿಲ್ಲ : ದೇವೇಗೌಡ
ಜಿ.ಟಿ. ದೇವೇಗೌಡ ಬಿಜೆಪಿಗೆ?
ಜವಾಬ್ದಾರಿ ಹೊರಲು ಕೃಷ್ಣ ಆಸಕ್ತಿ?