ರಂಗನತಿಟ್ಟು ಪಕ್ಷಿಧಾಮದಲ್ಲಿ ಕಾಣಿಸಿಕೊಳ್ಳುವ ಪಕ್ಷಿಗಳ ವಲಸೆಯ ವಿಷಯ ಹೇಗೋ ಏನೋ ಗೊತ್ತಿಲ್ಲ. ಅದರೆ ಬೆಂಗಳೂರೆಂಬ ವಿಭಿನ್ನ ರಾಜಕೀಯಗಳ ಧಾಮದಲ್ಲಿ ವಲಸೆಯಂತೂ ಪ್ರಾರಂಭವಾಗಿದೆ. ಚುನಾವಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಇದು ಸಹಜವೂ ಆಗಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.
ಈ ವಲಸೆಗೆ ಇತ್ತೀಚಿನ ಸೇರ್ಪಡೆ ಉತ್ತರಹಳ್ಳಿ ಕ್ಷೇತ್ರದ ಎಂ. ಶ್ರೀನಿವಾಸ್. 7 ವರ್ಷ ಇಟ್ಕೊಂಡು ದೇವೇಗೌಡರು ಮೋಸ ಮಾಡಿದರು ಎಂದು ಹೇಳುತ್ತಲೇ ಮಾಧ್ಯಮದವರ ಮುಂದೆ ಗದ್ಗದಿತರಾದ ಶ್ರೀನಿವಾಸ್ ಬಿಜೆಪಿಗೆ ಮರಳುತ್ತಿರುವ ನಿರ್ಧಾರವನ್ನು ಪ್ರಕಟಿಸಿದರು.
ಇನ್ನು ಕೆಲವೇ ದಿನಗಳಲ್ಲಿ ಸಮಾವೇಶವನ್ನು ಮಾಡಿ ವಿಧ್ಯುಕ್ತವಾಗಿ ಬಿಜೆಪಿಗೆ ಸೇರುವುದಾಗಿ ಶ್ರೀನಿವಾಸ್ ತಿಳಿಸಿದ್ದಾರೆ. ಪಕ್ಷಕ್ಕೆ ಉತ್ತಮ ವಾತಾವರಣವಿದೆ, ಜತೆಗೆ ಅನುಕಂಪದ ಅಲೆಯೂ ಬಿಜೆಪಿಗೆ ಇದೆ ಎಂಬ ಹಿನ್ನೆಲೆಯಲ್ಲಿ ಶ್ರೀನಿವಾಸ್ ನಿರ್ಧಾರ ಸೂಕ್ತವಾಗಿದೆ ಎಂಬುದು ಅನುಭವಿಗಳ ಮಾತು.
|