ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ತಾಕತ್ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ
ದಕ್ಷಿಣ ಭಾರತದಲ್ಲಿ ಹೇಳಿಕೊಳ್ಳುವಂತಹ ಪ್ರಾಬಲ್ಯತೆ ತೋರದಿದ್ದ ಬಿಜೆಪಿಗೆ ತನ್ನ ಅಸ್ತಿತ್ವ ಸಾಬೀತುಪಡಿಸಲು ಕರ್ನಾಟಕ ಮುನ್ನುಡಿ ಬರೆಯಲಿದೆಯೇ? ಇತ್ತೀಚಿನ ಕೆಲ ವಿದ್ಯಮಾನಗಳನ್ನು ನೋಡಿದರೆ ಹೌದು ಎನಿಸುತ್ತದೆ.

ಜೆಡಿಎಸ್ ಪಕ್ಷದ ನಾಯಕರ ನಡವಳಿಕೆಯಿಂದ ಬೇಸತ್ತು ಪಕ್ಷ ಬಿಡಲು ಮನಸ್ಸು ಮಾಡುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆ ಅಲಂಗೂರು ಶ್ರೀನಿವಾಸ್, ಬಚ್ಚೇಗೌಡ, ಚಲುವರಾಯ ಸ್ವಾಮಿ ಹಾಗೂ ಜಿ.ಟಿ. ದೇವೇಗೌಡ.

ಇದುವರೆಗೂ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂಥ ಬಲವಿರಲಿಲ್ಲ. ಜಿ.ಟಿ.ದೇವೇಗೌಡ ಪಕ್ಷಕ್ಕೆ ಸೇರುವುದರೊಂದಿಗೆ ಪ್ರಾಬಲ್ಯ ಹೆಚ್ಚುತ್ತಿದೆ. ಪಕ್ಷದ ಸದಸ್ಯತ್ವ ಯಾರಿಗೆ ಬೇಕಾದರೂ ಸಿಗುತ್ತದೆ. ಅದರೆ ಚುನಾವಣೆಗೆ ಟಿಕೆಟ್ ನೀಡುವಾಗ ಸ್ಥಳೀಯ ನಾಯಕರೊಂದಿಗೆ ಸಮಾಲೋಚಿಸಿದ ನಂತರವೇ ತೀರ್ಮಾನಿಸಲಾಗುವುದು ಎಂಬುದು ಪಕ್ಷದ ನಿಲುವು.

ಪಕ್ಷವನ್ನು ಸಮರ್ಥ ರೀತಿಯಲ್ಲಿ ಮರು ಸಂಘಟಿಸಿ ಮುಂಬರುವ ಚುನಾವಣೆಯಲ್ಲಿ ಬಹುಮತದೊಂದಿಗೆ ಸ್ವಂತ ಬಲದ ಸರ್ಕಾರ ರಚಿಸುವ ಆಶಯ ಹೊಂದಿರುವ ಬಿಜೆಪಿಯ ಕರೆಗೆ ಮತದಾರ ಓ ಎನ್ನುವನೇ ಎಂಬುದನ್ನು ಕಾದು ನೋಡಬೇಕಿದೆ.
ಮತ್ತಷ್ಟು
ಎಂ.ಶ್ರೀನಿವಾಸ ಬಿಜೆಪಿಗೆ ಸೇರ್ಪಡೆ
ಡಾ|| ಸುಬ್ರಮಣಿಯನ್ ಸ್ವಾಮಿ ಬಿಜೆಪಿಗೆ?
ನಮ್ಮ ಪಕ್ಷಕ್ಕೆ ಬನ್ನಿ ಪ್ರಕಾಶ್: ಬಂಗಾರಪ್ಪ
ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ
ಯಡ್ಡಿ ಸುಮ್ಮನಿರದಿದ್ದರೆ ಜನ್ಮಜಾಲಾಡುವೆ: ರೇವಣ್ಣ
ನನ್ನ ಜಂಘಾಬಲವಿನ್ನೂ ಉಡುಗಿಲ್ಲ : ದೇವೇಗೌಡ