ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಂಗ್ಲೆ ಬಿಡಿ, ಇಲ್ಲವೇ ಬಾಡಿಗೆ ಕೊಡಿ..!!
ಇದು ಯಾವುದೇ ಮಾಫಿಯಾದವರ ಧಮಕಿಯಲ್ಲ. ಕೆಲ ಮಾಜಿ ಸಚಿವರಿಗೆ ಬಂದಿರುವ ನೋಟೀಸು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ 60 ದಿನಗಳೊಳಗಾಗಿ ಸಂಬಂಧಪಟ್ಟ ಸಚಿವರು ಮನೆ ಖಾಲಿ ಮಾಡಬೇಕಿರುವುದು ಅಗತ್ಯ. ಇಲ್ಲದಿದ್ದರೆ ಅದರ ಬಾಡಿಗೆ, ನೀರು-ವಿದ್ಯುತ್ ಬಿಲ್, ಪೀಠೋಪಕರಣದ ಬಳಕೆಯ ವೆಚ್ಚ ಇವೆಲ್ಲವನ್ನೂ ಅವರು ಪಾವತಿಸಬೇಕಾಗುತ್ತದೆ. ಬಾಡಿಗೆಯೂ ಕೇವಲ ಒಂದೆರಡು ಸಾವಿರ ರೂಪಾಯಿ ಇರುವುದಿಲ್ಲ. ಒಂದೂವರೆಯಿಂದ ಎರಡು ಲಕ್ಷ ರೂಪಾಯಿಗಳವರೆಗೆ ಇರುತ್ತದೆ.

ಈ ಹಿನ್ನೆಲೆಯಲ್ಲಿ ಡಿಸೆಂಬರ್ 10ರೊಳಗಾಗಿ ಬಂಗ್ಲೆಗಳನ್ನು ಖಾಲಿ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಎಲ್ಲ ಮಾಜಿ ಸಚಿವರಿಗೆ ಸೂಚನೆಗಳನ್ನು ನೀಡಿದೆ ಎಂದು ತಿಳಿದುಬಂದಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಚಿವ ಸಂಪುಟದಲ್ಲಿ ಒಟ್ಟು 34 ಮಂದಿ ಸಚಿವರಿದ್ದರು. ಈ ಪೈಕಿ ಕೇವಲ ನಾಲ್ಕು ಮಂದಿಯನ್ನು ಹೊರತುಪಡಿಸಿ ಉಳಿದವರೆಲ್ಲರೂ ಅಧಿಕೃತ ಬಂಗಲೆಗಳನ್ನು ಪಡೆದಿದ್ದರು ಎಂದು ತಿಳಿದುಬಂದಿದೆ.
ಮತ್ತಷ್ಟು
ಅಧ್ಯಕ್ಷರ ಬದಲಾವಣೆ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್
ತಾಕತ್ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ
ಎಂ.ಶ್ರೀನಿವಾಸ ಬಿಜೆಪಿಗೆ ಸೇರ್ಪಡೆ
ಡಾ|| ಸುಬ್ರಮಣಿಯನ್ ಸ್ವಾಮಿ ಬಿಜೆಪಿಗೆ?
ನಮ್ಮ ಪಕ್ಷಕ್ಕೆ ಬನ್ನಿ ಪ್ರಕಾಶ್: ಬಂಗಾರಪ್ಪ
ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ