ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಆತಿಥ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಕರ್ನಾಟಕ ಪ್ರದೇಶ ಹೋಟೆಲು ಮತ್ತು ಉಪಾಹಾರ ಮಂದಿರಗಳ ಸಂಘ ಮತ್ತು ಬೆಂಗಳೂರು ಹೋಟೆಲುಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 10-12-2007ರಂದು ಸಂಜೆ 5.30 ಗಂಟೆಗೆ ಆತಿಥ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಈ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ. ಜಿ.ವೆಂಕಟಸುಬ್ಬಯ್ಯನವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭವನ್ನು ಕರ್ನಾಟಕ ಬ್ಯಾಂಕ್ ನಿಯಮಿತದ ಮಹಾಪ್ರಬಂಧಕ ಪಿ.ಜಯರಾಮ ಭಟ್ ಉದ್ಘಾಟಿಸಲಿದ್ದು, ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ|| ವಿ.ಎಸ್.ಆಚಾರ್ಯ ಸುವರ್ಣ ಮಹೋತ್ಸವ ಭವನದ ಸಮರ್ಪಣಾ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರುಗಳಾದ ಕೆ.ಜಯಪ್ರಕಾಶ್ ಹೆಗಡೆ, ಕೆ.ಗೋಪಾಲ ಪೂಜಾರಿ ಹಾಗೂ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಇವರುಗಳು ಪಾಲ್ಗೊಳ್ಳಲಿದ್ದಾರೆ.

ರಾಯಚೂರಿನ ಕೆ.ಸಿ.ಕೃಷ್ಣಮೂರ್ತಿ, ದಾವಣೆಗೆರೆಯ ಕೆ.ವಿ.ಆನಂದರಾವ್, ಬೆಂಗಳೂರಿನ ಎನ್.ಕೃಷ್ಣಮೂರ್ತಿ, ಹುಬ್ಬಳ್ಳಿಯ ಎಸ್.ಜನಾರ್ಧನರಾವ್ ಹಾಗೂ ಬೆಂಗಳೂರಿನ ಕೆ.ವಾಸುದೇವರಾವ್ ಇವರುಗಳು ಆತಿಥ್ಯರತ್ನ ಪ್ರಶಸ್ತಿಯಿಂದ ಪುರಸ್ಕ್ಕತಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಬಂಗ್ಲೆ ಬಿಡಿ, ಇಲ್ಲವೇ ಬಾಡಿಗೆ ಕೊಡಿ..!!
ಅಧ್ಯಕ್ಷರ ಬದಲಾವಣೆ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್
ತಾಕತ್ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ
ಎಂ.ಶ್ರೀನಿವಾಸ ಬಿಜೆಪಿಗೆ ಸೇರ್ಪಡೆ
ಡಾ|| ಸುಬ್ರಮಣಿಯನ್ ಸ್ವಾಮಿ ಬಿಜೆಪಿಗೆ?
ನಮ್ಮ ಪಕ್ಷಕ್ಕೆ ಬನ್ನಿ ಪ್ರಕಾಶ್: ಬಂಗಾರಪ್ಪ