ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಭೂ ಕಬಳಿಕೆ ವರದಿ : ಚರ್ಚೆಗೆ ರಾಮಸ್ವಾಮಿ ಆಹ್ವಾನ
ಬೆಂಗಳೂರು ಸುತ್ತಮುತ್ತ ಆಗಿರಬಹುದಾದ ಭೂ ಕಬಳಿಕೆಗೆ ಸಂಬಂದಿಸಿ ತಾವು ಸಲ್ಲಿಸಿರುವ ವರದಿಯ ಕುರಿತು ಅನುಮಾನಗಳಿದ್ದರೆ ಮುಕ್ತವಾಗಿ ಚರ್ಚಿಸಬಹುದು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಎಲ್ಲ ಪಕ್ಷಗಳ ಮುಖಂಡರೂ ಒಂದೆಡೆ ಸೇರಿ ಅನುಮಾನ ಪರಿಹರಿಸಿಕೊಳ್ಳಲು ಅನುವಾಗುವಂತೆ ಸಭಾಧ್ಯಕ್ಷರು ಸೂಕ್ತ ವೇದಿಕೆಯೊಂದರ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯಪಾಲರನ್ನು ನಾನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಕೇವಲ ಮಧ್ಯಂತರ ವರದಿಯ ಎರಡು ಭಾಗಗಳನ್ನು ನೀಡಿರುವೆನೇ ವಿನಃ, ಅಂತಿಮ ವರದಿಯನ್ನಲ್ಲ. ಇದುವರೆಗೆ ಕಲೆಹಾಕಿರುವ ಮಾಹಿತಿಗಳನ್ನು ವಿಧಾನಸಭಾಧ್ಯಕ್ಷ ಕೃಷ್ಣ ಅವರಿಗೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವೆ. ಆದರೆ ಸತ್ಯ ತಿಳಿಯದ ಹಲವರು ನನ್ನ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ರಾಮಸ್ವಾಮಿ ತಿಳಿಸಿದ್ದಾರೆ.
ಮತ್ತಷ್ಟು
ರಾಜ್ಯದಲ್ಲಿ ಕೃಷ್ಣರ ಪಾಂಚಜನ್ಯ ಮೊಳಗಲಿದೆಯೇ?
ಆತಿಥ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಬಂಗ್ಲೆ ಬಿಡಿ, ಇಲ್ಲವೇ ಬಾಡಿಗೆ ಕೊಡಿ..!!
ಅಧ್ಯಕ್ಷರ ಬದಲಾವಣೆ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್
ತಾಕತ್ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ
ಎಂ.ಶ್ರೀನಿವಾಸ ಬಿಜೆಪಿಗೆ ಸೇರ್ಪಡೆ