ಜೆಡಿ(ಎಸ್) ಇದೀಗ ಒಡೆದ ಮನೆಯಾಗಿದೆ. ಒಡೆದ ಮನೆಯನ್ನು ಸರಿಪಡಿಸುವ ಜವಾಬ್ದಾರಿಯನ್ನು ಇದೀಗ ಕುಮಾರಸ್ವಾಮಿಯವರಿಗೆ ವಹಿಸಲಾಗಿದೆ. ಕುಮಾರಣ್ಣನ ಟ್ರಿಕ್ ಜೆಡಿ(ಎಸ್)ಗೆ ಟೇಕ್ ಆಗಿ ಅಧಿಕಾರದ ಗಾದಿಗೆ ಮತ್ತೊಂದು ಬ್ರೇಕ್ ಸಿಗುತ್ತದೆ ಎಂಬುದು ಜೆಡಿ(ಎಸ್) ವರಿಷ್ಠರ ಅಭಿಪ್ರಾಯವಾಗಿದೆ.
ಬಂಡಾಯದ ಬಾವುಟ ಹಾರಿಸಿದ್ದ ಚೆಲುವರಾಯ ಸ್ವಾಮಿ ಅವರ ಮನ ಒಲಿಸುವಲ್ಲಿ ಕುಮಾರಣ್ಣ ತೀವ್ರ ಪ್ರಯತ್ನ ನಡೆಸಿದ್ದಾರೆ. ಜಮೀರ್ ಅಹಮ್ಮದ್, ಬಾಲಕೃಷ್ಣ ಮತ್ತು ಪುಟ್ಟಣ್ಣನವರ ಜೊತೆಯಲ್ಲಿ ಚೆಲುವರಾಯಸ್ವಾಮಿಯನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿ(ಎಸ್) ನಿಮ್ಮ ಆಸ್ತಿ, ನೀವು ಕಟ್ಟಿ ಬೆಳೆಸಿ ಉಳಿಸಿ ಪೋಷಿಸಿದ್ದೀರಿ. ಬೆಳೆದ ಮೊಳಕೆಯನ್ನು ಚಿವುಟುವ ಯತ್ನ ಮಾಡಬೇಡಿ. ನಮ್ಮ ನಿಮ್ಮ ಬಾಂಧವ್ಯ ಪಕ್ಷಕ್ಕಿಂತಲೂ ಹೊರತಾದದ್ದು ಎಂದಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ಚೆಲುವರಾಯಸ್ವಾಮಿ ನಾನೂ ಕುಮಾರಣ್ಣ ಸೋದರರಿದ್ದಂತೆ. ಅವರ ಸಾರಥ್ಯದಲ್ಲಿ ಪಕ್ಷದ ಬಿಕ್ಕಟ್ಟು ಶಮನವಾಗಲಿದೆ ಎಂದು ಹೇಳುವ ಮೂಲಕ ಚೆಲುವರಾಯರನ್ನು ಮರಳಿ ಗೂಡಿಗೆ ತರುವ ಯತ್ನದಲ್ಲಿ ಕುಮಾರಣ್ಣ ಪ್ರಾಥಮಿಕ ಯಶಸ್ಸು ಪಡೆದಿದ್ದಾರೆ ಎನ್ನಲಾಗಿದೆ.
|