ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅದ್ಯಕ್ಷರ ಬದಲಾವಣೆ ಇಲ್ಲ: ಮೊಯ್ಲಿ
ಆದಷ್ಟು ಬೇಗ ಕೆಪಿಸಿಸಿ ನಾಯಕತ್ವ ಬದಲಾಗಲಿ ಎಂದು ಬಯಸುತ್ತಿದ್ದವರಿಗೆ ಸದ್ಯಕ್ಕೆ ಅಂಥ ಸಾಧ್ಯತೆಗಳು ಇಲ್ಲ ಎಂದು ಹೇಳುವ ಮೂಲಕ ಮೊಯ್ಲಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಮುಂಬರಲಿರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ನಾಯಕತ್ವ ಬದಲಾಗಲಿ ಎಂದು ಪಕ್ಷದ ಒಂದು ವಲಯ ಬಯಸಿದ್ದರೆ; ಅಂಥ ಅಗತ್ಯವಿಲ್ಲ, ಖರ್ಗೆಯವರಂಥ ದಲಿತ ನಾಯಕ ಅಧ್ಯಕ್ಷರಾಗಿರುವುದೇ ನಮಗೊಂದು ಹೆಮ್ಮೆ ಎಂದು ದಿನೇಶ್ ಗುಂಡೂರಾವ್ ವಕಾಲತ್ತು ವಹಿಸಿದ್ದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಪಕ್ಷದಲ್ಲಿ ಒಬ್ಬೊಬ್ಬ ನಾಯಕರಿಗೂ ಅನುಯಾಯಿಗಳ ವರ್ಗ ಇರುತ್ತದೆ. ಅವರು ಒತ್ತಾಯಿಸಿದ ಮಾತ್ರಕ್ಕೆ ನಾಯಕತ್ವ ಬದಲಾವಣೆ ಆಗುತ್ತದೆ ಎಂದು ನೀರೀಕ್ಷಿಸುವುದು ತರವಲ್ಲ. ಜೊತೆಗೆ ಪಕ್ಷದ ವಿಚಾರಗಳನ್ನು ಸಾರ್ವಜನಿಕವಾಗಿ ಹೊರಹಾಕುವುದೂ ಒಳ್ಳೆಯ ಅಭ್ಯಾಸವಲ್ಲ ಎಂದು ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ತ್ರದ ರಾಜ್ಯಪಾಲ ಎಸ್.ಎಂ.ಕೃಷ್ಣರು ರಾಜ್ಯಕ್ಕೆ ಮರಳುವ ವಿಷಯವಿರಲಿ ಅಥವಾ ಮತ್ತಾವುದೇ ವಿಷಯವಿರಲಿ ಎಲ್ಲವನ್ನೂ ಸಮಗ್ರವಾಗಿ ಅವಲೋಕಿಸಿದ ನಂತರವೇ ಹೈಕಮಾಂಡ್ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ ಎಂದು ಮೊಯ್ಲಿ ಸ್ಪಷ್ಟೀಕರಿಸಿದ್ದಾರೆ.
ಮತ್ತಷ್ಟು
ಕರ್ನಾಟಕದಲ್ಲಿ ಪೋಲಿಯೊ ಪ್ರಕರಣ ಪತ್ತೆ
ಜಿ.ಟಿ.ದೇವೇಗೌಡ ಬಿಜೆಪಿ ಸೇರ್ಪಡೆ
ಚೆಲುವರಾಯಸ್ವಾಮಿ ಮನಗೆದ್ದ ಕುಮಾರಸ್ವಾಮಿ
ಲೋಕಾಯುಕ್ತ ತನಿಖೆಗೆ ಮೊಯ್ಲಿ ಆಗ್ರಹ
ಎಂ.ಪಿ.ಪ್ರಕಾಶ್ ಜೆಡಿಯು ಸಂಪರ್ಕದಲ್ಲಿದ್ದಾರೆ: ಸೋಮಶೇಖರ್
ಭೂ ಕಬಳಿಕೆ ವರದಿ : ಚರ್ಚೆಗೆ ರಾಮಸ್ವಾಮಿ ಆಹ್ವಾನ