ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕೃಷ್ಣ ಬಂದರೆ ತಪ್ಪಿಲ್ಲ: ಬಂಗಾರಪ್ಪ
ರಾಜ್ಯ ರಾಜಕೀಯಕ್ಕೆ ಮರಳುತ್ತೇನೆ ಎಂದು ಮಹಾರಾಷ್ಟ್ತ್ರದ ರಾಜ್ಯಪಾಲ ಎಸ್.ಎಂ.ಕೃಷ್ಣ ಎಲ್ಲೂ ಹೇಳಿಕೊಂಡಿಲ್ಲ. ಒಂದು ವೇಳೆ ಬಂದರೂ ಅದೇನೂ ತಪ್ಪಲ್ಲ. ಆದರೆ ಹಾಗೆಂದು ಹೇಳಿಕೊಂಡು ಅವರ ಕೆಲ ಶಿಷ್ಯರು ರಾಜಕಾರಣ ಮಾಡುತ್ತಿರುವುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯಪಾಲ ಹುದ್ದೆಯಲ್ಲಿರುವವರು ವಾಸ್ತವವಾಗಿ ರಾಜಕಾರಣ ಮಾಡಬಾರದು. ಆದರೆ ಬಹುತೇಕ ರಾಜ್ಯಪಾಲರು ರಾಜಕಾರಣದಲ್ಲಿ ತಲೆ ಹಾಕುತ್ತಾರೆ. ಆ ಸ್ಥಾನದ ಮಹತ್ವವೇ ಅಂಥದ್ದು ಎಂದು ಬಂಗಾರಪ್ಪ ತಮ್ಮ ಎಂದಿನ ವಿಶಿಷ್ಟ ಶೈಲಿಯಲ್ಲಿ ಈ ವಿದ್ಯಮಾನವನ್ನು ವಿಶ್ಲೇಷಿಸಿದರು.

ರಾಜ್ಯಪಾಲರಾಗಿದ್ದವರು ಸಂಸದರಾದ, ಮುಖ್ಯಮಂತ್ರಿ ಆದ ಉದಾಹರಣೆಗಳು ಸಾಕಷ್ಟಿವೆ. ಈ ಹಿನ್ನೆಲೆಯಲ್ಲಿ ಕೃಷ್ಣರು ರಾಜ್ಯಪಾಲ ಹುದ್ದೆಯನ್ನು ತ್ಯಜಿಸಿ ರಾಜ್ಯ ರಾಜಕೀಯಕ್ಕೆ ಮರಳಬಹುದಾಗಿದೆ ಎಂಬುದು ಬಂಗಾರಪ್ಪನವರ ಸ್ಪಷ್ಟ ಅಭಿಪ್ರಾಯವಾಗಿತ್ತು.

ಎದುರು ಪಕ್ಷದವರು ಯಾರ ನಾಯಕತ್ವದಲ್ಲಿ ಚುನಾವಣೆಗೆ ಧುಮುಕುತ್ತಿದ್ದಾರೆ ಎಂಬುದನ್ನು ಆಧರಿಸಿ ಇತರೆ ಪಕ್ಷಗಳು ತಂತಮ್ಮ ಚುನಾವಣಾ ರಣನೀತಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಕೃಷ್ಣರು ರಾಜ್ಯ ರಾಜಕೀಯಕ್ಕೆ ಮರಳಿದರೆ ಇತರ ಪಕ್ಷಗಳೂ ಸಮರ್ಥ ನಾಯಕತ್ವವನ್ನು ಮುಂದುಮಾಡಬೇಕಾಗುತ್ತದೆ. ನಾಯಕತ್ವದ ವರ್ಚಸ್ಸೇ ಅಂಥಾದ್ದು ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.
ಮತ್ತಷ್ಟು
ಟಿಕೆಟ್ ಬೇಕಿದ್ದರೆ ದೆಹಲಿಗೆ ದೌಡಾಯಿಸಿ
ಅದ್ಯಕ್ಷರ ಬದಲಾವಣೆ ಇಲ್ಲ: ಮೊಯ್ಲಿ
ಕರ್ನಾಟಕದಲ್ಲಿ ಪೋಲಿಯೊ ಪ್ರಕರಣ ಪತ್ತೆ
ಜಿ.ಟಿ.ದೇವೇಗೌಡ ಬಿಜೆಪಿ ಸೇರ್ಪಡೆ
ಚೆಲುವರಾಯಸ್ವಾಮಿ ಮನಗೆದ್ದ ಕುಮಾರಸ್ವಾಮಿ
ಲೋಕಾಯುಕ್ತ ತನಿಖೆಗೆ ಮೊಯ್ಲಿ ಆಗ್ರಹ