ತುಮಕೂರಿನ ಶ್ರೀ ಸಿದ್ದಗಂಗಾ ಶ್ರೀಗಳೂ ಸೇರಿದಂತೆ ಯಾವ ಮಠಾಧಿಪತಿಗಳಿಗೂ ತಾವು ಅಗೌರವ ತೋರಿಲ್ಲ. ರಾಜಕೀಯದಿಂದ ಮಠಾಧಿಪತಿಗಳು ಅಲ್ಪಮಟ್ಟಿಗೆ ದೂರವಿರಬೇಕು ಎಂದಿದ್ದೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಸುತ್ತಿರುವ ಸ್ವಾರ್ಥಸಾಧಕರು ಲಿಂಗಾಯಿತರ ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಕುಮಾರಣ್ಣ ತಿಳಿಸಿದ್ದಾರೆ.
ಈಗಾಗಲೇ ಜಿ.ಟಿ.ದೇವೇಗೌಡರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಆದ್ದರಿಂದ ಅವರ ಜೊತೆ ಯಾವುದೇ ಮಾತುಕತೆ ಮುಂದುವರಿಸುವ ಯೋಜನೆಗಳಿಲ್ಲ. ಅದರೆ ಎಂ.ಪಿ.ಪ್ರಕಾಶ್ ಹಾಗೂ ಇತರ ನಾಯಕರೊಂದಿಗೆ 8 ನೇ ತಾರೀಖಿನಂದು ಚರ್ಚೆ ನಡೆಸಲಿರುವೆ. ಪಕ್ಷದಲ್ಲಿ ಅವರನ್ನು ಉಳಿಸಿಕೊಳ್ಳಲು ಕೊನೆಯ ಹಂತದವರೆಗೂ ಪ್ರಯತ್ನ ನಡೆಸುವೆ; ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
|