ಕರ್ನಾಟಕದ ರಾಜಕೀಯ ರಣರಂಗದಲ್ಲಿನ ಆರೋಪ-ಪ್ರತ್ಯಾರೋಪಗಳ ಮೆಗಾ ಸೀರಿಯಲ್ ಮುಗಿಯುವ ಸೂಚನೆಗಳು ಕಾಣುತ್ತಿಲ್ಲ. ದೋಸ್ತಿ ಸರ್ಕಾರ ಮುರಿದುಬಿದ್ದ ಮೇಲಂತೂ ಇದಕ್ಕೆ ಕೊನೆ ಮೊದಲಿಲ್ಲವಾಗಿದೆ.
ಈಗಿನ ಸರದಿ ಮಾಜಿ ಸಚಿವ ಎಚ್.ಡಿ.ರೇವಣ್ಣನವರದು. ಹಾಸನದಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದಾಗಿ ಯಡಿಯೂರಪ್ಪ ಹೇಳಿದ್ದು, ಅದನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ್ದಾರೆ ರೇವಣ್ಣ.
ವಾಸ್ತವವಾಗಿ ಅವ್ಯವಹಾರ ನಡೆದಿರುವುದು ಶಾಲಾ ಮಕ್ಕಳಿಗೆ ಸೈಕಲ್ ವಿತರಿಸುವ ಯಡಿಯೂರಪ್ಪನವರ ಯೋಜನೆಯಲ್ಲಿ. ಸೈಕಲ್ ಸರಬರಾಜು ಮಾಡಿರುವ ಕಂಪನಿ ಮೊದಲು 1746/- ರೂಪಾಯಿಗಳಿಗೆ ಕೊಟೇಶನ್ ನೀಡಿತ್ತು. ಆದರೆ ಅಂತಿಮವಾಗಿ ಅನುಮೋದನೆಗೊಂಡ ಬೆಲೆ 2030/- ರೂಪಾಯಿಗಳು. ಮೊದಲು ಈ ಹಗರಣದ ಕುರಿತು ಯಡಿಯೂರಪ್ಪ ವಿವರಣೆ ನೀಡಲಿ ಎಂದು ಗುಟುರು ಹಾಕಿದ್ದಾರೆ ರೇವಣ್ಣ.
|