ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆನೇಕಲ್‌ನಲ್ಲಿ ಆನೆ ಬಂತೊಂದಾನೆ...!
ಅದಾವ ಗಳಿಗೆಯಲ್ಲಿ ಈ ಊರಿಗೆ ಆನೆಕಲ್ಲು ಎಂಬ ಹೆಸರಿಟ್ಟರೋ ಗೊತ್ತಿಲ್ಲ, ಆನೆಗಳ ಉಪಟಳಕ್ಕೆ ಕೊನೆಯೇ ಇಲ್ಲವಾಗಿದೆ.ಆನೇಕಲ್ ಸಮೀಪದ ಕೃಷ್ಣದೊಡ್ಡಿಯಲ್ಲಿ ರಾತ್ರಿ ಆನೆಗಳು ಕಾಣಿಸಿಕೊಂಡು ದಾಂಧಲೆ ಮಾಡಿವೆ. ಹೊಲಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ ಮಾಡಿರುವುದರಿಂದ ಅಲ್ಲಿನ ರೈತರು ಕಂಗಾಲಾಗಿದ್ದಾರೆ.

ರಕ್ಷಣೆಗಾಗಿ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿವರ್ಗ ಇಲ್ಲಿಗೆ ಧಾವಿಸಿದ್ದರೂ ಅದರಿಂದೇನೂ ಪ್ರಯೋಜನವಾದಂತಿಲ್ಲ. ಕಾರಣ ಆನೆಗಳನ್ನು ನೋಡಲು ಬರುವ ಕುತೂಹಲಿಗಳ ದಂಡು ಮಾಡುವ ಅಬ್ಬರದಿಂದಾಗಿ ಹೊರ ಹೊರಟ ಆನೆಗಳು ಮತ್ತೆ ನೀಲಗಿರಿ ತೋಪಿನೊಳಗೆ ಸೇರಿಕೊಳ್ಳುತ್ತಿವೆ.

ಇದರೊಂದಿಗೆ ಹಗಲು ವೇಳೆಯಲ್ಲಿ ಸಂಚಾರ ದಟ್ಟಣೆಯೂ ಇರುತ್ತದಾದ್ದರಿಂದ ಆನೆಗಳು ರಸ್ತೆ ದಾಟಲು ತೊಂದರೆಯಾಗುತ್ತಿದೆ ಎಂದು ತಿಳಿದುಬಂದಿದೆ.ಇದರಿಂದ ಜನಗಳಿಗೆ ತೊಂದರೆಯಾಗಿರುವ ವರದಿಗಳು ಬಂದಿಲ್ಲವಾದರೂ ರೈತರು ಕಷ್ಟ ಪಟ್ಟುಬೆಳೆದ ಬೆಳೆಗೆ ಹಾನಿಯಾಗಿರುವುದು ರೈತರ ಆಕ್ರೋಶವನ್ನು ಹೆಚ್ಚಿಸಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಯಡ್ಡಿ ಅವ್ಯವಹಾರ ಸಾಬೀತುಪಡಿಸಲಿ: ರೇವಣ್ಣ ಗುಡುಗು
ಯಾರೊಂದಿಗೂ ಮೈತ್ರಿ ಇಲ್ಲ: ಧರಂಸಿಂಗ್
ಮಠಾಧಿಪತಿಗಳಿಗೆ ಅಗೌರವ ತೋರಿಲ್ಲ: ಕುಮಾರಣ್ಣ
ಕುಮಾರಣ್ಣ ವಿರುದ್ಧ ತುಮಕೂರಿನಲ್ಲಿ ಭುಗಿಲೆದ್ದ ಆಕ್ರೋಶ
ಕಾಂಗ್ರೆ‌ಸ್‌ನಲ್ಲಿ ನಾಯಕತ್ವದ ಕೊರತೆ
ಕೃಷ್ಣ ಬಂದರೆ ತಪ್ಪಿಲ್ಲ: ಬಂಗಾರಪ್ಪ