ಮಂಡ್ಯ ಜಿಲ್ಲೆಯಲ್ಲಿನ ದೇವೇಗೌಡರ ಹಾಗೂ ಜೆಡಿಎಸ್ನ ಪ್ರಾಬಲ್ಯ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಎದುರಾಳಿಗಳಿಗೆ ಬಹಿರಂಗವಾಗಿ ಸೆಡ್ಡು ಹೊಡೆದಿದ್ದಾರೆ.
ಮುಖ್ಯಮಂತ್ರಿ ಪದವಿಯಿಂದಿಳಿದ ಮೇಲೆ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಗೆ ಅಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ನಮ್ಮ ಎದುರಾಳಿಗಳನೇಕರು ಜಿಲ್ಲೆಯ ಜೆಡಿಎಸ್ ಮುಖಂಡರನ್ನು ತಮ್ಮ ಪಕ್ಷಕ್ಕೆ ಎಳೆದುಕೊಳ್ಳಲು ಇನ್ನಿಲ್ಲದ ಸಾಹಸ ಮಾಡಿದರು. ಆದರೆ ನಮ್ಮ ಪಕ್ಷದ ಈ ನಾಯಕ ಮಿತ್ರರು ಅದಕ್ಕೆ ಓಗೊಡದೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದಕ್ಕಾಗಿ ಈ ಮಿತ್ರರಿಗೆ ನಾನು ಚಿರಋ ುಣಿಯಾಗಿರುತ್ತೇನೆ ಎಂದು ಕುಮಾರಣ್ಣ ಈ ಸಂದರ್ಭದಲ್ಲಿ ನುಡಿದರು.
ಈ ನಾಯಕರನ್ನು ಜೆಡಿಎಸ್ನಲ್ಲೇ ಉಳಿಸಿಕೊಳ್ಳಲು ಯಾವುದೇ ಬ್ಲಾಕ್ಮೇಲ್ ತಂತ್ರವನ್ನು ಬಳಸಿಲ್ಲ ಎಂದ ಕುಮಾರಣ್ಣ, ತಮ್ಮ ವಿರುದ್ಧ ಗೌಡರ ಕುಟುಂಬ ಮಾಟ-ಮಂತ್ರ ಮಾಡಿಸಿದೆ ಎಂಬ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಅವರ ಈ ಮಾತುಗಳೇ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ನಮಗೆ ಅವುಗಳ ಅಗತ್ಯವಿಲ್ಲ ಎಂದು ನುಡಿದರು.
|