ಮಲ್ಲಿಕಾರ್ಜುನ ಖರ್ಗೆಯವರ ನಾಯಕತ್ವದಲ್ಲಿ ಪಕ್ಷ ಬಲಿಷ್ಠವಾಗಿದೆ ಎಂದು ಹೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಈಗ ಮಾತಿನ ಧಾಟಿಯನ್ನು ಕೊಂಚ ಬದಲಿಸಿದ್ದಾರೆ.ಮಹಾರಾಷ್ಟ್ತ್ರದ ರಾಜ್ಯಪಾಲ ಎಸ್.ಎಂ.ಕೃಷ್ಣ ಕರ್ನಾಟಕದ ರಾಜಕೀಯಕ್ಕೆ ಮರಳುವುದಾದರೆ ಅದನ್ನು ತಾವು ಸ್ವಾಗತಿಸುವುದಾಗಿ ಧರಂಸಿಂಗ್ ಹೇಳಿದ್ದಾರೆ.
ಕೃಷ್ಣರನ್ನು ಕರ್ನಾಟಕ ರಾಜಕೀಯಕ್ಕೆ ಮರಳಿಸುವಲ್ಲಿ ಹೈಕಮಾಂಡ್ ಆಸಕ್ತಿ ತಳೆದಿದೆ ಎಂಬ ಮಾತುಗಳಿಗೆ ಈ ಹಿನ್ನೆಲೆಯಲ್ಲಿ ಧರಂಸಿಂಗ್ ಮಾತುಗಳಿಗೆ ವಿಶೇಷ ಅರ್ಥ ಬಂದಿದೆ.
ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಮಠಾಧಿಪತಿಗಳು ರಾಜಕೀಯದ ವಿಷಯದಲ್ಲಿ ತಲೆಹಾಕುವುದು ಅಷ್ಟು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
|