ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್ ಕೊಳೆತು ನಾರುತ್ತಿದೆ: ಸಿಂಧ್ಯಾ
ಕಳೆದ 20 ತಿಂಗಳ ಅಧಿಕಾರಾವಧಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ನಡೆಸಿರುವ ಹಗರಣಗಳು ತನಿಖೆಗೊಳಗಾಗಬೇಕಿವೆ ಎಂದು ಬಿಎಸ್ಪಿ ನಾಯಕ ಪಿ.ಜಿ.ಆರ್.ಸಿಂಧ್ಯಾ ಅಭಿಪ್ರಾಯಪಟ್ಟಿದ್ದಾರೆ.

ಜೆಡಿಎಸ್ ಪಕ್ಷವಂತೂ ಕೊಳೆತು ನಾರುತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಪರಸ್ಪರರ ಮೇಲೆ ಮಾಡುತ್ತಿರುವ ದೋಷಾರೋಪಗಳು, ಎಚ್ಚರಿಕೆಗಳು, ಬ್ಲಾಕ್‌ಮೇಲ್‌ಗಳು ಜನರಲ್ಲಿ ಅಸಹ್ಯ ಹುಟ್ಟಿಸಿವೆ. ಇಂಥ ಸಂದರ್ಭದಲ್ಲಿಯೇ ನಾವು ಚುನಾವಣೆಗೆ ಹೋಗಬೇಕಾಗಿ ಬಂದಿದೆ ಎಂಬ ಅಸಮಾಧಾನವನ್ನು ಸಿಂಧ್ಯಾ ವ್ಯಕ್ತಪಡಿಸಿದರು.

ಕಳೆದ 20 ತಿಂಗಳ ಅವಧಿಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಎನ್ನುವುದೇ ಇರಲಿಲ್ಲ. ಇಂಧನ, ಹಣಕಾಸು, ಲೋಕೋಪಯೋಗಿ ಇವೇ ಮೊದಲಾದ ಇಲಾಖೆಗಳಲ್ಲಿ ನಡೆದಿರಬಹುದಾದ ಭ್ರಷ್ಟಾಚಾರಗಳ ಕುರಿತು ತನಿಖೆಯಾದರೆ ಈ ಮಾತಿಗೆ ಪುಷ್ಟಿ ದೊರಕುತ್ತದೆ ಎಂದು ಸಿಂಧ್ಯಾ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಮತ್ತಷ್ಟು
ಟಿಕೆಟ್ ಹಂಚಿಕೆಯಲ್ಲಿ ಕೇಂದ್ರದ ಹಸ್ತಕ್ಷೇಪವಿಲ್ಲ: ಯಡಿಯೂರಪ್ಪ
ಕೃಷ್ಣ ಬಂದರೆ ಸ್ವಾಗತ: ಧರಂಸಿಂಗ್
ನಮ್ಮ ಪ್ರಾಬಲ್ಯ ಮುರಿಯಲಾಗದು: ಕುಮಾರಸ್ವಾಮಿ
ಬಿಜೆಪಿ ಬಸ್ಸಿಗೆ ಕುಮಾರಣ್ಣ ರೆಡ್ ಸಿಗ್ನಲ್..!
ಸಾಗರೋಲ್ಲಂಘನಕ್ಕೆ ವಿರೋಧವಿಲ್ಲ: ಪೇಜಾವರ ಶ್ರೀ
ಆನೇಕಲ್‌ನಲ್ಲಿ ಆನೆ ಬಂತೊಂದಾನೆ...!