ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚನ್ನಪಟ್ಟಣದಿಂದ ಸ್ಪರ್ಧಿಸಲು ಕುಮಾರಣ್ಣ ಒಲವು?
ತಮ್ಮನ್ನು ಗೆಲ್ಲಿಸಿದ ರಾಮನಗರ ಕ್ಷೇತ್ರವನ್ನು ಬಿಟ್ಟು ಕುಮಾರಣ್ಣ ಚನ್ನಪಟ್ಟಣದೆಡೆ ಹೊರಳಲಿದ್ದಾರೆಯೇ? ಹೌದು ಎನ್ನುತ್ತವೆ ರಾಜಕೀಯ ಮೂಲಗಳು.

ಹಿಂದೆಂದೂ ಇಲ್ಲದಂತೆ ರಾಮನಗರವನ್ನು ಕುಮಾರಣ್ಣ ಅಭಿವೃದ್ದಿ ಪಡಿಸಿದ್ದರು. ಎರಡು ಹೊಸ ಜಿಲ್ಲೆಗಳು ರಚನೆಯಾಗುವ ಸಂದರ್ಭದಲ್ಲಿ ಚಿಕ್ಕಬಳ್ಳಾಪುರಕ್ಕೆ ಕೇವಲ 75 ಕೋಟಿಗಳಷ್ಟು ಮಾತ್ರ ಮಂಜೂರಾಗಿದ್ದರೆ, ರಾಮನಗರಕ್ಕೆ ಸಿಕ್ಕ ಪ್ರಮಾಣ ಸಾವಿರ ಕೋಟಿಯನ್ನೂ ಮೀರಿತ್ತು. ಹೀಗಿರುವಾಗ ಕ್ಷೇತ್ರ ಬದಲಾವಣೆಗೆ ಕಾರಣವಾದರೂ ಏನು ಎಂಬ ಪ್ರಶ್ನೆ ಕೇಳಿದರೆ ಅಧಿಕಾರ ಹಸ್ತಾಂತರದ ಗುಮ್ಮ ಎದುರಾಗುತ್ತದೆ.

ಒಪ್ಪಂದವಾದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರವಾಗದ್ದರಿಂದ ರಾಮನಗರದ ಲಿಂಗಾಯಿತರು ಸಹಜವಾಗಿಯೇ ತಮ್ಮ ವಿರುದ್ಧ ಕೋಪಿಸಿಕೊಂಡಿದ್ದಾರೆ ಎಂಬ ಅರಿವು ಕುಮಾರಣ್ಣನಿಗೂ ಇದೆ. ವೃಥಾ ಏಕೆ ಮೈನೋವು ಎಂಬ ಹಿನ್ನೆಲೆಯಲ್ಲಿ ಒಕ್ಕಲಿಗರು ಹೆಚ್ಚಿರುವ ಚನ್ನಪಟ್ಟಣವನ್ನು ನೆಚ್ಚಿಕೊಂಡಿದ್ದಾರೆ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ.
ಮತ್ತಷ್ಟು
ಮುಖ್ಯಮಂತ್ರಿ ಐ ಲವ್ ಯೂ ಚಿತ್ರಕ್ಕೆ ಪ್ರತಿಭಟನೆ
ಜೆಡಿಎಸ್ ಕೊಳೆತು ನಾರುತ್ತಿದೆ: ಸಿಂಧ್ಯಾ
ಟಿಕೆಟ್ ಹಂಚಿಕೆಯಲ್ಲಿ ಕೇಂದ್ರದ ಹಸ್ತಕ್ಷೇಪವಿಲ್ಲ: ಯಡಿಯೂರಪ್ಪ
ಕೃಷ್ಣ ಬಂದರೆ ಸ್ವಾಗತ: ಧರಂಸಿಂಗ್
ನಮ್ಮ ಪ್ರಾಬಲ್ಯ ಮುರಿಯಲಾಗದು: ಕುಮಾರಸ್ವಾಮಿ
ಬಿಜೆಪಿ ಬಸ್ಸಿಗೆ ಕುಮಾರಣ್ಣ ರೆಡ್ ಸಿಗ್ನಲ್..!