ನನ್ನೆದುರು ಜೆಡಿಯು, ಬಿಎಸ್ಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಆಹ್ವಾನವಿದೆ. ಇವುಗಳಲ್ಲೊಂದನ್ನು ಆಯ್ಕೆ ಮಾಡುತ್ತೇನೆಯೇ ವಿನಃ ಅಪ್ಪ-ಮಕ್ಕಳ ಪಕ್ಷದಲ್ಲಿ ಇನ್ನು ಇರಲಾರೆ - ಇದು ಬಂಡಾಯ ನಾಯಕ ಎಂ.ಪಿ.ಪ್ರಕಾಶರ ಸ್ಪಷ್ಟ ನುಡಿ.
ತಮ್ಮ ಬೆಂಬಲಿಗರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಈ ತಿಂಗಳ 12ರ ನಂತರ ನನ್ನ ಅಂತಿಮ ನಿರ್ಧಾರ ತಿಳಿಸುವೆ ಎಂದರು.
ದೇವೇಗೌಡರು ಹಾಗೂ ಅವರ ಪುತ್ರರು ಮಾಡಿದ ನಂಬಿಕೆ ದ್ರೋಹವೇ ಇನ್ನೂ ಹಸಿರಾಗಿದೆ. ಹೀಗಿರುವಾಗ, ಪ್ರಕಾಶ್‌ರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಪ್ರಯತ್ನಿಸುತ್ತೇವೆ ಎಂಬ ಅವರ ಮಾತನ್ನು ಹೇಗೆ ನಂಬುವುದು. ಈಗ ಅನುಭವಿಸಿರುವುದೇ ಸಾಕಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಲಿಂಗಾಯಿತ ಜನಾಂಗದ ಕುರಿತು ಹಾಗೂ ಮಠಾಧೀಶರ ಕುರಿತು ಜೆಡಿಎಸ್ ಮುಖಂಡರಿಂದ ವ್ಯಕ್ತವಾಗಿರುವ ನಡವಳಿಕೆಗಳು ಮುಂದಿನ ಚುನಾವಣೆಯಲ್ಲಿ ಪ್ರಭಾವ ಬೀರುವುದರಿಂದ ಪ್ರಕಾಶ್ರ ಮುಂದಿನ ಹೆಜ್ಜೆ ಯಾವುದು ಎಂಬುದೇ ಈಗ ಕುತೂಹಲವನ್ನುಂಟುಮಾಡಿದೆ.
|