ಚೀರನಹಳ್ಳಿ ಶಂಕರ್ ಕೊಲೆಯ ಪ್ರಮುಖ ಆರೋಪಿಯಾಗಿದ್ದ ಮಂಡ್ಯ ನಗರಸಭೆ ಸದಸ್ಯ ಜಡೇಜಾ ರವಿಯವರ ಕಗ್ಗೊಲೆಯಾಗಿದೆ.
ಇಂದು ಬೆಳಗ್ಗೆ 11.30ರ ಸುಮಾರಿಗೆ ಎಲಿಯೂರ್ ಗೇಟ್ ಬಳಿ ಈ ದುಷ್ಕ್ಕತ್ಯ ಸಂಭವಿಸಿದ್ದು, ಟಾಟಾ ಸುಮೋದಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ತ್ರಗಳಿಂದ ರವಿಯ ಮೇಲೆ ಹಲ್ಲೆ ಮಾಡಿ, ಕೈ ಕತ್ತರಿಸಿ ಅದನ್ನು ಚೀರನಹಳ್ಳಿ ಶಂಕರ್ ಸಮಾಧಿ ಬಳಿ ಇಟ್ಟು ಪೂಜೆ ಮಾಡಿ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.
ಕೊಲೆ ಮಾಡಿದ ನಂತರ ಟಾಟಾ ಸುಮೋದ ಬದಲಿಗೆ ಜಡೇಜಾ ರವಿಯ ಕಾರಿನಲ್ಲೇ ದುಷ್ಕರ್ಮಿಗಳು ಪರಾರಿಯಾಗಿರುವುದು ಅಚ್ಚರಿ ಹುಟ್ಟಿಸಿದೆ.
ರೌಡಿ ಪಟ್ಟಿಯಲ್ಲಿ ಜಡೇಜಾ ರವಿಯ ಹೆಸರಿದ್ದು ಆತ ಭೂಗತ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ. ಈ ಕೃತ್ಯದಲ್ಲಿ ಜಡೇಜಾ ರವಿಯ ಸಹಚರರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
|